Reading Time: < 1 minute
ಚೆಯ್ಯಂಡಾಣೆ,19. ಸ್ಥಳೀಯ ಗಣೇಶ ಸೇವಾ ಸಮಿತಿಯ ವತಿಯಿಂದ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ಶ್ರೀ ಗೌರಿ ಗಣೇಶೋತ್ಸವ ವಿಜೃಂಭಣೆ ಯಿಂದ ನಡೆಯಿತು.
ಬೆಳಿಗ್ಗೆ 6 ಗಂಟೆಗೆ ಶ್ರೀ ಗಣಪತಿ ಹೋಮ,ನಂತರ ಗೌರಿ ಮತ್ತು ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ಮಹಾ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.ನೆರದಿದ್ದ ಭಕ್ತದಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪೂಜಾ ಕಾರ್ಯಗಳನ್ನು ಅರ್ಚಕರಾದ ಪೃಥ್ವಿ ರವರು ನೆರವೇರಿಸಿದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಮಧ್ಯಾಹ್ನದ ನಂತರ ಮಹಾಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕರಡ ಹೊಳೆಯಲ್ಲಿ ವಿಸರ್ಜಿಸಲಾಯಿತು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ