ನಾಪೋಕ್ಲು : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್ ಭವ ಉಚಿತ ಆರೋಗ್ಯ ತಪಾಸಣಾ ಮೇಳ ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ನಂಜುಂಡಯ್ಯ ಉದ್ಘಾಟಿಸಿ ಮಾತನಾಡಿ ಯಾವುದೇ ಒಂದು ದೇಶ ಮುಂದುವರಿಯಬೇಕಾದರೆ ಅಲ್ಲಿನ ತಾಯಿ ಮತ್ತು ಶಿಶುವಿನ ಮರಣ ಹಾಗೂ ಒಬ್ಬ ಮನುಷ್ಯ ಎಷ್ಟು ದಿನ ಬದುಕಿರಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.ಆ ನಿಟ್ಟಿನಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಬಹಳ ಮುಖ್ಯವಾಗಿದೆ.ಅರೋಗ್ಯ ಸಮಸ್ಯೆ ಎದುರಿಸುತ್ತಿರುವ ತಾಯಿ ಹಾಗೂ ಕಡಿಮೆ ತೂಕದ ಮಕ್ಕಳನ್ನು ಇಂತಹ ಶಿಬಿರದಮುಕಾಂತರ ಗುರುತಿಸಿ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದು ಮೇಳದ ಉದ್ದೇಶವಾಗಿದೆ ಎಂದರು.ಯಾವುದೇ ಆರೋಗ್ಯ ಸಮಸ್ಯೆ ಇದ್ದರು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಪಡೆದುಕೊಳ್ಳಬೇಕು. ಮುಖ್ಯವಾಗಿ ಎಲ್ಲರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಬೇಕೆಂದು ಸಲಹೆ ನೀಡಿದರು.
ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪೂವಯ್ಯ ಮಾತನಾಡಿ ರೋಗಿಗಳು ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆಯಲು ಆಸ್ಪತ್ರೆಗಳಿಗೆ ಬರುವಾಗ ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ತರಬೇಕು ಏಕೆಂದರೆ ರೋಗಿಗಳಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಾದರೆ ಇದು ಬಹಳ ಮುಖ್ಯ.ಇದರಿಂದ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಲು ಸಾಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ಉಪಾಧ್ಯಕ್ಷೆ ಹೇಮಾವತಿ ಮಾತನಾಡಿ ಇಲ್ಲಿ ಹೆಚ್ಚಿನ ವೈದ್ಯರ ಅವಶಕತೆ ಇದೆ ಶೀಘ್ರದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ವೈದ್ಯರನ್ನು ನೇಮಕ ಮಾಡಬೇಕು. ಇಂತಹ ಆರೋಗ್ಯ ಮೇಳಗಳ ಆಯೋಜನೆಯಿಂದ ಗ್ರಾಮೀಣಮಟ್ಟದ ಜನರಿಗೆ ಎಲ್ಲಾ ರೀತಿಯ ವೈದ್ಯರ ಸೌಲಭ್ಯ ಸಿಗಲಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅರೋಗ್ಯ ಮೇಳದಲ್ಲಿ ಸಾಮಾನ್ಯ ಚಿಕೆತ್ಸೆ,ಕೀಲು ಮತ್ತು ಮೂಳೆವಿಭಾಗ, ದಂತ ಚಿಕೆತ್ಸೆ, ಚರ್ಮರೋಗ, ಸ್ತ್ರೀರೋಗ ಮತ್ತು ಪ್ರಸೂತಿ ಸೇವೆಗಳು, ಮಕ್ಕಳ ಸೇವೆಗಳು, ಕಣ್ಣು ಕಿವಿ,ಮೂಗು,ಗಂಟಲು ತಪಾಸಣೆ, ಮಾನಸಿಕ ತಜ್ಞರ ಸೇವೆಗಳ ಉಪಯೋಗಗಳನ್ನು ಸುಮಾರು 191ಜನರು ಪಡೆದುಕೊಂಡರು.
ಈ ಸಂದರ್ಭ ನಾಪೋಕ್ಲು ಸಮುದಾಯ ಅರೋಗ್ಯ ಕೇಂದ್ರದ ವೈದ್ಯರಾದ ಡಾ. ಜೀವನ್,ದಂತ ವೈದ್ಯರಾದ ಡಾ.ನೂರ್ ಫಾತಿಮಾ,ಆಸ್ಪತ್ರೆಯ ಮೇಲ್ವಿಚಾರಕ ಮದ್ ಸೂದನ್ ಸೇರಿದಂತೆ ವಿವಿಧ ಚಿಕಿತ್ಸಾ ವಿಭಾಗದ ವೈದ್ಯರುಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ: ಝಕರಿಯ ನಾಪೋಕ್ಲು