ಚೆಯ್ಯ0ಡಾಣೆ, ಸೆ 20. ಚೆಯ್ಯ0ಡಾಣೆ ಸಮೀಪದ ಕೊಕೇರಿ ಗ್ರಾಮದ ಕಾವೇರಿ ಮಹಿಳಾ ಮಂಡಲದ ಕಟ್ಟಡದಲ್ಲಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರಾ.ಎಸ್. ಪೊನ್ನಣ್ಣ ನವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಗ್ರಾಮಸ್ಥ ಚೇನಂಡ ಜೆಪ್ಪು ದೇವಯ್ಯ ಮಾತನಾಡಿ ಈವಾಗ ತಾನೇ ನೂತನವಾಗಿ ಆಯ್ಕೆಯಾದ ಶಾಸಕರು ನೀವು, ನಿಮ್ಮ ಈ ಅವಧಿಯಲ್ಲಿ ನೀವು ಮುತುವರ್ಜಿ ವಹಿಸಿ ನಮ್ಮ ಗ್ರಾಮದ ಮೇಲೆ ಅಭಿಮಾನವಿಟ್ಟು ನಮ್ಮ ಕೊಕೇರಿ ಗ್ರಾಮದ ಕೊಕೇರಿ ಕೊಳಕೇರಿ ಮಾರ್ಗದ 6 ಕಿ.ಮಿಟರ್ ರಸ್ತೆಯನ್ನು ಡಾಂಬರಿಕರಣ ಮಾಡಿಸಿಕೊಡಬೇಕು, ಅದರ ಜೊತೆ ನಮ್ಮ ಒಂದು ನ್ಯಾಯಾಲಯ ತೀರ್ಪು ಮಂಗಳೂರಿನಲ್ಲಿದೆ ರಸ್ತೆ ಅಗಲೀಕರಣದ್ದು ಅದರ ಅಡೆತಡೆಗಳನ್ನು ನಿವಾರಿಸಿಕೊಡಬೇಕು, ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಹಾಗೂ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಹಾಗೂ ಕಂದಾಯ ಇಲಾಖೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಇದಕ್ಕೆಲ್ಲ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಗ್ರಾಮಸ್ಥರ ಪರವಾಗಿ ಬಿದ್ದಂಡ ರವಿ ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ನನ್ನ ಕೈಯಲ್ಲಾಗುವಂತೆ ಪ್ರಾಮಾಣಿಕವಾಗಿ ಪ್ರಯತ್ನ ಪಡುವೆ ನಿಮ್ಮ ಪ್ರತಿನಿದಿಯಾಗಿ ಸೇವೆ ಮಾಡಲು ಸದಾಸಿದ್ದನಿದ್ದೇನೆ 6 ತಿಂಗಳೊಳಗೆ ಕಂದಾಯ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುದು ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ನನ್ನ ಉದ್ದೇಶ ಯಾವುದೇ ಅಧಿಕಾರಿಗಳು ಲಂಚ ಪಡೆದರೆ ಕೂಡಲೇ ಮಾಹಿತಿ ನೀಡಿ ಅವರಿಗೆ ತಕ್ಕ ಶಿಕ್ಷೆ ನೀಡಲಿದ್ದೇನೆ, ರಸ್ತೆಯ ಬಗ್ಗೆ ಈಗಾಗಲೇ ಆಶ್ವಾಸನೆ ಕೊಡಲ್ಲ ಆದಷ್ಟು ಬೇಗ ಪರಿಹರಿಸಲು ಪ್ರಯತ್ನಿಸುವ ಭರವಸೆ ನೀಡಿದರು. ನೀರಿನ ಸಮಸ್ಯೆ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.
ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಚೇನಂಡ ಸನ್ನಿ ಬೋಪ್ಪಯ್ಯ ವಹಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ,ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ