Reading Time: < 1 minute
ಕಡಂಗ: ಅರಪಟ್ಟು ಗ್ರಾಮದ ಶ್ರೀ ಬಲಮರಿ ಮಹಾಗಣಪತಿ ಸೇವಾ ಸಮಿತಿಯಿಂದ 32ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವನ್ನು ಮಂಗಳವಾರ ದಿ0ದ ಸೋಮವಾರದವರೆಗೆ ನಡೆಸಲಾಗುವುದು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಮಂಗಳವಾರ ಬೆಳಿಗ್ಗೆ 7.30 ಗಂಟೆಗೆ ಗಣಪತಿ ಹೋಮ ನಡೆಸಲಾಯಿತು. ಬೆಳಿಗ್ಗೆ 9:00ಗೆ ಶ್ರೀ ಗಣಪತಿಯ ವಿಸರ್ಜನಾ ಮೂರ್ತಿಯ ಪ್ರತಿಷ್ಠಾಪನೆ ವಿಘ್ನೇಶ್ವರನ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲಾಯಿತು .
ವಿಘ್ನೇಶ್ವರ ವಿಸರ್ಜನಾ ಮೂರ್ತಿಯನ್ನು ಕೂಡಿರ ಪ್ರಸನ್ನ ತಮ್ಮಯ್ಯ ಮತ್ತು ಅವರ ಸಂಸಾರವು ನೀಡಿದರು.
ಪೂಜಾ ಕಾರ್ಯಕ್ರಮಕ್ಕೆ ಅರ್ಚಕರಾದ ಕೀರ್ತಿಶ್ ನೇತೃತ್ವವಿವಹಿಸಿದರು ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲಚಂಡ ಸಭಾ ಕರ0ಬಯ್ಯ ,ಕಾರ್ಯದರ್ಶಿ ಅನ್ನ0ಬೀರ ಗಿರಿ ಮತ್ತು ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು
ವರದಿ: ನೌಫಲ್ ಕಡಂಗ