ಚೆಯ್ಯ0ಡಾಣೆ, ಸೆ 20. ಸಮೀಪದ ಎಡಪಾಲ ಗ್ರಾಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ನಂತರ ಪ್ರಥಮ ಬಾರಿಗೆ ಆಗಮಿಸಿದ ಎ.ಎಸ್. ಪೊನ್ನಣ್ಣ ನವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸ್ವಾಗತಿಸಿ ಗ್ರಾಮಕ್ಕೆ ಬರ ಮಾಡಿಕೊಂಡರು.
ಸ್ಥಳೀಯ ಮದರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ ನಮ್ಮೆಲ್ಲ ನಾಯಕರು ಕಾರ್ಯಕರ್ತರು ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆ ನಡೆಸಿ ಎರಡು ಕ್ಷೇತ್ರದಲ್ಲಿ ನಮಗೆ ಗೆಲುವನ್ನ ತಂದಿದ್ದೀರಾ ಇದು ಕರ್ನಾಟಕದ ಚಿತ್ರಣವನ್ನೇ ಬದಲಿಸಿರುವ ಚುನಾವಣೆ, ಇನ್ನು ಬರುತ್ತಿರುದು ದೊಡ್ಡ ಸವಾಲು ಅದು ಮುಂಬರುವ ಲೋಕ ಸಭಾ ಚುನಾವಣೆ ಅದರಲ್ಲೂ ಕೂಡ ಎರಡು ಕ್ಷೇತ್ರದಲ್ಲಿ ಅತೀ ಹೆಚ್ಚು ಬಹುಮತದಿಂದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಇವತ್ತಿನಿಂದ ಸಜ್ಜಾಗಬೇಕು,
ಮಾನ್ಯ ಸಿದ್ದರಾಮಯ್ಯ ನವರ ಸರ್ವನುಮತದಿಂದ ಮುಖ್ಯ ಮಂತ್ರಿಗಳಾಗಿ ಆಯ್ಕೆ ಮಾಡಿ ಮಾನ್ಯ ಡಿ.ಕೆ.ಶಿವಕುಮಾರ್ ರವನ್ನು ಉಪ ಮುಖ್ಯ ಮಂತ್ರಿಯನ್ನಾಗಿ ಆಯ್ಕೆ ಮಾಡಿ ಕೇವಲ ನೂರು ದಿನಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನ ನಾವು ಮೈಸೂರಿನಲ್ಲಿ ಉದ್ಘಾಟನೆ ಮಾಡಿದ ದಿನಾಂಕದಂದು ಕೇವಲ ನೂರೆ ದಿವಸ ಐದು ಗೆರೆಂಟಿಗಳನ್ನು ಅನುಷ್ಠಾನಕ್ಕೆ ತರುವಂತ ಕೆಲಸ ಮಾಡಿದ್ದೇವೆ ಇದು ಪ್ರಪಂಚದ ಇತಿಹಾಸವನ್ನೇ ತೆಗೆದು ನೋಡಿದರು ಕೂಡ ಯಾವ ಸರಕಾರ ಕೂಡ ಮಾಡಲಾಗದ ಕಾರ್ಯವನ್ನ ಸಿದ್ದರಾಮಯ್ಯ ಸರಕಾರ ಕಾಂಗ್ರೆಸ್ ಸರಕಾರ ಮಾಡಿದೆ ಎಂದರೆ ತಪ್ಪಾಗಲಾರದು,ವಿರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ಮೂವತ್ತಾರು ಸಾವಿರಕ್ಕಿಂತ ಹೆಚ್ಚು ಗ್ರಹಿಣಿಯರಿಗೆ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಸಂದಾಯ ಆಗುತ್ತೆ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಗ್ರಹಿಣಿಯರಿಗೆ ತಿಂಗಳಿಗೆ ಎರಡು ಸಾವಿರ ಸಂದಾಯ ಆಗಿದೆ.ನುಡಿದ ಭರವಸೆ, ಅಶ್ವಾಸನೆಯನ್ನ ಚುನಾವಣೆ ಸಂದರ್ಭದಲ್ಲಿ ಕೊಟ್ಟೇದ್ದೇವೆ ಎಂಬ ಕಾರಣದಿಂದ ಈ ಸರಕಾರ ಇಂದೆ ನಿಲ್ಲಲಿಲ್ಲ ನಾವು ನುಡಿದಂತೆ ನಡೆಯುವ ಸರಕಾರ ಅದು ಕಾಂಗ್ರೆಸ್ ಸರಕಾರ. ಅವರು ಪ್ರಜಾಪ್ರಭುತ್ವ ವಿರೋಧಿಗಳು, ನಮ್ಮ ಸಂವಿಧಾನದ ವಿರೋಧಿಗಳು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಐದು ಗೆರೆಂಟಿಗಳನ್ನು ಮನೆ ಮನೆಗೆ ಕಂಠಘೋಷವಾಗಿ ಪ್ರಚಾರವನ್ನು ಮಾಡುತೇವೆ ಮುಂಬರುವ ಚುನಾವಣೆ ದೇಶದ ಭವಿಷ್ಯವನ್ನ ನಿರ್ಧಾರ ಮಾಡುವ ಚುನಾವಣೆಯಾಗಿದೆ ನಮ್ಮ ಸಂವಿಧಾವನ್ನು ಉಳಿಸಬೇಕು ಸಂವಿಧಾನದ ಅಡಿಯಲ್ಲಿರುವ ಜಾತ್ಯಾತಿತ ತತ್ವವನ್ನು ಉಳಿಸಬೇಕೆಂದರು.
ಇದೇ ಸಂದರ್ಭ ಶಾಸಕರಾದ ಎ.ಎಸ್. ಪೊನ್ನಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಾದ ಹನೀಫ ಚೋಕಂಡಳ್ಳಿ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ,ಗ್ರಾ.ಪಂ.ಸದಸ್ಯ ಮಮ್ಮದ್,ಸುಬೈರ್,ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ, ಉಮ್ಮರ್ ಸಿಆರ್ ಪಿ, ಉಮ್ಮರ್ ಮಾಸ್ಟರ್,ವೈ.ಎಂ.ಮೊಹಮ್ಮದ್, ಬಷೀರ್,ಮುದರಿಸ್ ನಿಝರ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಮಳೆಗಾಲದಲ್ಲಿ ಹೊಳೆಯ ನೀರು ಹರಿಯುತಿರುದ್ದನ್ನು ಭೇಟಿ ನೀಡಿ ಪರಿಶೀಲಿಸಿದರು.ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.ಕೂಡಲೇ ಇದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ