ಕಡಂಗ: ಕಾಕೋಟುಪರಂಬು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಕಡಂಗ ವಿಜಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಸಲಾಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಲ್ಲಿಯಂಡ ಬಿದ್ದಪ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿರಾಜಪೇಟೆ ಕ್ಷೇತ್ರದ ಶಿಕ್ಷಣಾಧಿಕಾರಿ ಎಂ ಪ್ರಕಾಶ್ ರವರು ಮಾತನಾಡಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಬೆ ಅಡಗಿರುತ್ತದೆ ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಅದರಲ್ಲೂ ಮಕ್ಕಳಿಲ್ಲಿರುವಂತಹ ಪ್ರತಿಭೆಯನ್ನು ಅನಾವರಣಗೊಳಿಸಲು ಕಳೆದ 26 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.
ಸೋಲು ಗೆಲುವಿಗಿಂತಲು ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು ಮಕ್ಕಳಲ್ಲಿ ಸ್ಪರ್ಧಾಮನೋಭಾವ ಮೂಡಿರಬೇಕು ಎಂದು ನುಡಿದರು.
ವಿದ್ಯಾರ್ಥಿಗಳಿಗೆ ಭಕ್ತಿಗೀತೆ ,ಅಭಿನಯ ಗೀತೆ, ಧಾರ್ಮಿಕ ಭಾಷಣ ,ಕವನ ,ವಚನ ಆಶುಭಾಷಣ ,ಮಾಡಲಿಂಗ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಮೆರೆದರು ಮುಂದಿನ ಹಂತವಾದ ತಾಲೂಕು ಮಟ್ಟಕ್ಕೆ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾದರು.
ವಿಜಯ ಪ್ರಾರ್ಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಬೆಳ್ಳುಮಾಡು ಹೆಮ್ಮಾಡು, ತ್ರಿವೇಣಿ ,ಚಾಮಿಯಾಲ ,ಕಾ ಕೋಟಪರಂಬು ಶಾಲಾ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷರಾದ ಕೋದಂಡ ಸುಬ್ಬಯ್ಯ, ಕಾರ್ಯದರ್ಶಿ ಕಾಂಗಿರ ರವಿ ಮಾಚಯ್ಯ, ನಿರ್ದೇಶಕರಾದ ಕೋಡಿರ ಪೊನ್ನು ಮಂದಣ್ಣ, ಮುಕ್ಕಾಟಿರ ಬೋಪಯ್ಯ, ಬಲ್ಲಚಂಡ ಮಾದಯ್ಯ ,ಅರ್ಪಟು ಆಯುರ್ವೇದಿಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ್ ಶೈಲಜಾ,ಕಾಕೊಟು ಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಮಿ ಸುರೇಶ್ ,ಪಿ ಡಿ ಓ ಮಂಜುಳಾ ,ಕ್ಷೇತ್ರ ಸಮನ್ವಯ ಅಧಿಕಾರಿ ವನಜಾಕ್ಷಿ ,ಶಿಕ್ಷಣ ಪರಿವೀಕ್ಷಕಿ ಗಾಯಿತ್ರಿ, ಸಂಘದ ಪದಾಧಿಕಾರಿಗಳು ವಿಜಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರದ ಸೋಮಶೇಖರ್ ,ವಿಜಯ ಪ್ರಾರ್ಥಮಿಕ ಶಾಲಾ ಮುಖ್ಯೋಪದ್ಯರಾದ ಪಟ್ರಪಂಡ ಗೀತಾ ಭೋಜಮ್ಮ ಸ್ವಾಗತಿಸಿದರು ಕಾಕೂಟಪರಂಬು ಸಿ ಆರ್ ಪಿ ವಿದ್ಯಾರವರು ವಂದನಾರ್ಪಣೆಯನ್ನು ಮಾಡಿದರು.
ವರದಿ: ನೌಫಲ್ ಕಡಂಗ