ಕಕ್ಕಬೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಯಲ್ಲಿ ಭಾಗವಹಿಸಿದ ಅಂಬೇಡ್ಕರ್ ವಸತಿ ಶಾಲೆ ಕಕ್ಕಬೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಸಾಧನೆ ಮಾಡಿ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ.
1 ರಿಂದ 4 ನೇ ತರಗತಿ ವಿದ್ಯಾರ್ಥಿ ಗಳ ಸ್ವರ್ದೆಯಲ್ಲಿ ಮಣ್ಣಿನ ಮಾದರಿ ತಯಾರಿಕೆಯಲ್ಲಿ ಜಿಂಕೆ ಆಕೃತಿ ಮಾಡಿ ದೀಕ್ಷಿತ್ ಪ್ರಥಮ ಸ್ಥಾನ, ಛದ್ಮವೇಷ ಸ್ವರ್ದೆಯಲ್ಲಿ ಚಿಟ್ಟೆಯ ವೇಷ ಧರಿಸಿ ಮೋಹಿತ್ ದ್ವಿತೀಯ ಸ್ಥಾನ,ಇಂಗ್ಲಿಷ್ ಕಂಠಪಾಠ ದಲ್ಲಿ ರವಿಕೀರ್ತನ್ ತೃತೀಯ,ಭಕ್ತಿಗೀತೆಯಲ್ಲಿ ಕೃಷ್ಣ ದ್ವಿತೀಯ,ಲಘು ಸಂಗೀತದಲ್ಲಿ ಭವ್ಯ ಶ್ರೀ ದ್ವಿತೀಯ,ಚಿತ್ರಕಲೆಯಲ್ಲಿ ಸಂತೋಷ್ ಪ್ರಥಮ ಸ್ಥಾನಕ್ಕೆ ಪಾತ್ರರಾದರು.
5 ರಿಂದ 7 ನೇ ತರಗತಿ ವಿದ್ಯಾರ್ಥಿಗಳ ಸ್ವರ್ದೆಯಲ್ಲಿ ಮಣ್ಣಿನ ಮಾದರಿ ತಯಾರಿಕೆಯಲ್ಲಿ ಮೊಸಳೆ ಆಕೃತಿ ತಯಾರಿಸಿ ವಿನು ಪ್ರಥಮ,ಛದ್ಮವೇಷ ಸ್ವರ್ದೆಯಲ್ಲಿ ನೊಣ ವೇಷ ದರಿಸಿ ಪೊನ್ನಣ್ಣನಿಗೆ ಪ್ರಥಮ ಹಾಗೂ ಚಿತ್ರ ಕಲೆಯಲ್ಲಿ ತೃತೀಯ ಸ್ಥಾನ,
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ