Reading Time: < 1 minute
ಚೆಯ್ಯ0ಡಾಣೆ ಸೆ 25. ಎಡಪಾಲದ ಪೋಯಕೆರೆ ಫ್ರೆಂಡ್ಸ್ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.
ಬಾವಲಿ ಮುಖ್ಯ ರಸ್ತೆಯಿಂದ ಎಡಪಾಲ ಮಾರ್ಗವಾಗಿ ಕಡಂಗಕ್ಕೆ ಸಂಚರಿಸುವ,ಎಡಪಾಲ ಜುಮಾ ಮಸೀದಿಗೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ಬೆಳೆದು ನಿಂತಿದ್ದ ಕಾಡುಗಳನ್ನು ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಿ ಹಾಗೂ ರಸ್ತೆಯಲ್ಲಿ ಹಾಕಿದ್ದ ಪ್ಲಾಸ್ಟಿಕ್ ಬಾಟಲಿ,ಕಸಕಡ್ಡಿ ಮತಿತ್ತರ ತ್ಯಾಜ್ಯ ಗಳನ್ನು ಸಂಗ್ರಹಿಸಿದರು ವಿಲೇವಾರಿ ಮಾಡಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೋಯಕೆರೆ ಫ್ರೆಂಡ್ ನ ಉಮ್ಮರ್ ಸಿಆರ್ ಪಿ, ಬಷೀರ್ ಬಿಎಸ್ಆರ್, ಅಬ್ದುಲ್ಲ ಎ.ಎಂ,ಅಬ್ಬಾಸ್ ಪಿ.ಎ, ಸಲಾಂ ಪಿ.ಎ,ಸಲಾಂ ಪಿ.ಎಂ ಮತ್ತಿತರರು ಇದ್ದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ