ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಬಿಲ್ ನೀಡದೆ ಇದ್ದು ಪಂಚಾಯಿತಿ ಕಟ್ಟಡದಲ್ಲಿ ವಿದ್ಯುತ್ ಹಣ ಪಡೆಯಲು ಬಂದ ಚೆಸ್ಕಾಂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಬಿಲ್ ನೀಡುತ್ತಿದ್ದರು. ಅದರಂತೆ ಪ್ರತಿ ತಿಂಗಳು ಗ್ರಾಮಸ್ಥರು ಪಂಚಾಯಿತಿ ಕಟ್ಟಡದಲ್ಲಿ ಚೆಸ್ಕಾಂ ಸಿಬ್ಬಂದಿ ಹಣ ವಸೂಲಾತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆದರೆ ಕಳೆದ ಮೂರು ತಿಂಗಳುಗಳಿಂದ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ಬಿಲ್ ನೀಡಿಲ್ಲ.ಆದರೆ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ಹಣ ಪಡೆಯಲು ಪಂಚಾಯಿತಿ ಕಟ್ಟಡಕ್ಕೆ ಬಂದ ಸಂದರ್ಭ ಗ್ರಾಮಸ್ಥರು ವಿದ್ಯುತ್ ಬಿಲ್ ನೀಡದೆ ನಾವು ಹೇಗೆ ಹಣ ನೀಡುವುದು ಎಂದು
ಚೆಸ್ಕಾಂ ಸಿಬ್ಬಂದಿ ನಿಶಾಂತ್ ಎಂಬುವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಳೆದ 3 ತಿಂಗಳಿನಿಂದ ಈ ವ್ಯಾಪ್ತಿಯ ಮನೆಗಳಿಗೆ ಬಿಲ್ ನೀಡಲು ಯಾರು ಬರಲಿಲ್ಲ ಯಾರಿಗೂ ಬಿಲ್ ತಲುಪಿಲ್ಲ ಇದರಿಂದ ನಮಗೆ ತೊಂದರೆ ಆಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ,ಸದಸ್ಯರಾದ ವಿಲಿನ್, ಈರಪ್ಪ, ಗ್ರಾಮಸ್ಥರು, ಮತಿತ್ತರರು ಇದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ