ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಾಪೋಕ್ಲು ವ್ಯಾಪ್ತಿಯ ಮಸೀದಿ, ಮದರಸಗಳು
ನಾಪೋಕ್ಲು : ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1498ನೇ ಜನ್ಮದಿನಾಚರಣೆಯ ಅಂಗವಾಗಿ ನಾಪೋಕ್ಲು ವಿಭಾಗದ ಮಸೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ನಾಳೆ ಗುರುವಾರ ನಾಪೋಕ್ಲು ವಿಭಾಗದಲ್ಲಿ ಮುಸಲ್ಮಾನ ಬಾಂಧವರು ವಿಜೃಂಭಣೆಯಿಂದ ಪ್ರವಾದಿಯವರ ಜನ್ಮದಿನಾಚರಣೆಯನ್ನು ಆಚರಿಸಲಿದೆ.
ನಾಪೋಕ್ಲು ವಿಭಾಗದಲ್ಲಿರುವ ವಿವಿಧ ಜಮಾಅತ್ ಗೆ ಒಳಪಟ್ಟ ಮಸೀದಿ ಮದರಸಗಳನ್ನು ದೀಪಾಲಂಕಾರದಿಂದ ಅಲಂಕರಿಸಿ ಮದರಸಾ ವಿದ್ಯಾರ್ಥಿಗಳ, ಹಳೇ ವಿದ್ಯಾರ್ಥಿಗಳ,ಹಿರಿಯರ, ದರ್ಸ್ ಮುತಹಲ್ಲಿಂಗಳ ಕಲಾ ಸಾಹಿತ್ಯ ಸಂಭ್ರಮ,ಪುಟಾಣಿ ಮಕ್ಕಳ ದಫ್ ಪ್ರದರ್ಶನ,ಸ್ಕೌಟ್ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೃಂಭಣೆಯಿಂದ ಪ್ರವಾದಿ ಜನ್ಮದಿನ ಆಚರಿಸಲು ತೀರ್ಮಾನಿಸಲಾಗಿದೆ.
ನಾಪೋಕ್ಲು ಪಟ್ಟಣದ ಮೊಹಿಯುದ್ದೀನ್ ಜುಮಾ ಮಸೀದಿ, ಹಳೇ ತಾಲೂಕು ಜುಮಾ ಮಸೀದಿ, ಕೊಟ್ಟಮುಡಿ ಜುಮಾ ಮಸೀದಿ, ಚೆರಿಯಪರಂಬು ಜುಮಾ ಮಸೀದಿ,ಕೊಟ್ಟಮುಡಿ ಮರ್ಕಝ್ ಮಸೀದಿ,ಹೊದವಾಡ ಆಜಾದ್ ನಗರ ಜುಮಾ ಮಸೀದಿ,ಎಮ್ಮೆ ಮಾಡು ಜುಮಾ ಮಸೀದಿ,ಕಲ್ಲುಮೊಟ್ಟೆ ಜುಮಾ ಮಸೀದಿ,ಕೊಳಕೇರಿ ಜುಮಾ ಮಸೀದಿ, ಕುಂಜಿಲ ಜುಮಾ ಮಸೀದಿ ಸೇರಿದಂತೆ ವ್ಯಾಪ್ತಿಯ ಎಲ್ಲಾ ಮಸೀದಿ ಮದರಸಗಳು ದೀಪಾಲಂಕಾರದಿಂದ ಅಲಂಕೃತಗೊಂಡು ನೋಡುಗರ ಮನಸೆಳೆಯುತ್ತಿದೆ.
ನಾಳೆ ನಾಪೋಕ್ಲು ವ್ಯಾಪ್ತಿಯಲ್ಲಿರುವ ವಿವಿಧ ಜಮಾಅತ್ ನ ಮಸೀದಿಗಳಲ್ಲಿ ಮೌಲೂದ್ ಪಾರಾಯಣ,ವಿಶೇಷ ಪ್ರಾರ್ಥನೆ ಸೇರಿದಂತೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳನ್ನು ಸಾರುವ ಮೆರವಣಿಗೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ವರದಿ: ಝಕರಿಯ ನಾಪೋಕ್ಲು