Reading Time: < 1 minute
ಜುಮಾ ಮಸೀದಿಯಿಂದ ಕೋಕ್ಕಂಡ ಬಾಣೆ ದರ್ಗಾಕ್ಕೆ ಪ್ರವಾದಿ ಸಂದೇಶ ಜಾಥಾ
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಕಡಂಗ, ಸೆ 28. ಬದ್ರಿಯ ಜುಮಾ ಮಸೀದಿ ಹಾಗೂ ತಾಜುಲ್ ಉಲಮಾ ಮದರಸ ವತಿಯಿಂದ ವಿಜೃಂಭಣೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುರಹ್ಮಾನ್ ಅರಫಾ ದ್ವಜಾರೋಹಣ ನೆರವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜುಮಾ ಮಸೀದಿಯಿಂದ ಅದ್ದೂರಿ ಮೆರವಣಿಗೆ ಪಟ್ಟಣದಲ್ಲಿ ಸಾಗಲಾಯಿತು. ವಿದ್ಯಾರ್ಥಿಗಳಿಂದ ಧಫ್,ಸ್ಕೌಟ್, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆಯನ್ನು ಜಮಹತ್ ಖತೀಬ್ ಇಸ್ಮಾಯಿಲ್ ಲತೀಫಿ ನೆರವಿರಿಸಿದರು. ಈ ಸಂದರ್ಭದಲ್ಲಿ ಮದರಸ ಮುಖ್ಯೋಪಾಧ್ಯಾಯದರಾದ ಸಿಯಬುದ್ದಿನ್ ಜೌಹರಿ, ಜಮಾಅತ್ ಆಡಳಿತ ಮಂಡಳಿತಯ ಪದಾಧಿಕಾರಿಗಳು ಮತಿತ್ತರರು ಉಪಸ್ಥಿತರಿದ್ದರು.
ವರದಿ: ನೌಫಲ್ ಕಡಂಗ