ನಾಪೋಕ್ಲುವಿನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

Reading Time: 3 minutes

ಮೀಲಾದ್ ಜಾಥಾದಲ್ಲಿ ಗಮನಸೆಳೆದ ಮಕ್ಕಳ ದಫ್ ಪ್ರದರ್ಶನ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ನಾಪೋಕ್ಲು : ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1498ನೇ ಜನ್ಮದಿನಾಚರಣೆಯನ್ನು ನಾಪೋಕ್ಲುವಿನಲ್ಲಿ ಮುಸಲ್ಮಾನ ಬಾಂಧವರು ಸಂಭ್ರಮದಿಂದ ಆಚರಿಸಿದರು.

ನಾಪೋಕ್ಲು ಪಟ್ಟಣದ ಮೊಹಿಯುದ್ದೀನ್ ಜುಮಾ ಮಸೀದಿ, ಹಿದಾಯತುಲ್ ಇಸ್ಲಾಂ ಮದರಸ, ಹಳೇ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮಕ್ಕೆ ನಾಪೋಕ್ಲು ಜುಮಾ ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ಅವರು ಚಾಲನೆ ನೀಡಿದರು.

ಗುರುವಾರ ಬೆಳಗ್ಗೆ ಫಜರ್ ನಮಾಜಿನ ಬಳಿಕ ಪಟ್ಟಣದ ಮಸೀದಿಯಲ್ಲಿ ಪ್ರವಾದಿಯವರ ಹೆಸರಿನಲ್ಲಿ ಮೌಲೂದ್ ಪಾರಾಯಣ, ನಾಡಿನ ಸುಭೀಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ನಾಪೋಕ್ಲು ಪಟ್ಟಣದ ಮುಖ್ಯ ಬೀದಿಗಳಲ್ಲಿ ವಿಶ್ವ ಪ್ರವಾದಿಯವರ ಸೌಹಾರ್ಧತೆಯ ಸಂದೇಶ ಘೋಷಣೆಗಳನ್ನು ಸಾರುತ್ತಾ ನಡೆದ ಜಾಥಾದಲ್ಲಿ ವಿದ್ಯಾರ್ಥಿಗಳ,ಯುವಕರ ದಫ್ ಪ್ರದರ್ಶನ ನೋಡುಗರ ಗಮನಸೆಳೆಯಿತು.

ನಾಪೋಕ್ಲು ಪಟ್ಟಣದ ಮಾರುಕಟ್ಟೆ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಸಲಿಂ ಹಾರಿಸ್, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹ್ಮಾನ್ ಪ್ರವಾದಿಯವರ ಜನ್ಮದಿನದ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ

ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳ ಗಾಯನ ಸ್ಪರ್ಧೆ, ಭಾಷಣ,ಕವಾಲಿ,ಬುರ್ದಾ,ಸೇರಿದಂತೆ ಪ್ರವಾದಿಯವರ ಸಂದೇಶ ಸಾರುವ ಹಲವಾರು ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ಹಾಗೂ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಣೆ, ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ಆಬಿದ್, ಪಿ. ಎಂ.ರಶೀದ್,ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್,ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಖುರೇಶಿ,ಕಾರ್ಯದರ್ಶಿ ಅಹಮದ್ ಸಿ.ಎಚ್,ಸಹ ಕಾರ್ಯದರ್ಶಿ ಆಸ್ಕರ್ ಸೇಟ್,ಸದಸ್ಯರಾದ ಹಾರಿಸ್, ಮುಸ್ತಫ, ಬದುರುದ್ದೀನ್,ಇಬ್ರಾಹಿಂ ಮುಸ್ಲಿಯಾರ್,ಎಂ.ಎ. ಮನ್ಸೂರ್ ಆಲಿ, ಕೆ.ಎ. ಇಸ್ಮಾಯಿಲ್, ಓ.ಎಸ್.ಎಫ್,ಅಧ್ಯಕ್ಷ ಶುಹೈಬ್,ಮದರಸ ಅಧ್ಯಾಪಕರು,ಸೇರಿದಂತೆ ಮತ್ತಿತರ ಪ್ರಮುಖರು,ಜಮಾಅತ್ ನ ಎಲ್ಲಾ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಝಕರಿಯ ನಾಪೋಕ್ಲು

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments