ಕಡಂಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಪಟ್ಟು ಕಡಂಗ ಪಟ್ಟಣದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಪಂಚಾಯಿತಿ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ನಡೆಸಲಾಯಿತು.
ಮಹಾತ್ಮ ಗಾಂಧೀಜಿಯವರ ಜನ್ಮ ದಿನವಾದ ಇಂದು ಸ್ವಚ್ಛತಾ ದಿನದ ಅಂಗವಾಗಿ ಪಟ್ಟಣದ ಮುಖ್ಯರಸ್ತೆಗಳಲ್ಲಿನ ಕಸಗಳನ್ನು ಶೇಖರಿಸಿ ಗ್ರಾಮವನ್ನು ಸ್ವಚ್ಛತೆಯಿಂದ ಇಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಯರವರು ಸ್ವಚ್ಛತೆ ಕಾಪಾಡಲು ನಮ್ಮೆಲ್ಲರ ಕರ್ತವ್ಯ ಹಾಗೂ ಸ್ವಚ್ಛತೆಯಿಂದ ಆಗುವ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುಬ್ಬೀರ್ ಸಿ ಇ ಪಾಂಡ0ಡ ರಾಣಿ ಗಣಪತಿ ,ವಾಣಿ ತಮ್ಮಯ್ಯ ,ಗ್ರಾಮ ಪಂಚಾಯಿತಿ ಅಧಿಕಾರಿ ಆಶಾ ಕುಮಾರಿ, ದಿನೇಶ್, ಗಣಪತಿ ದೇವಸ್ಥಾನ ಅಧ್ಯಕ್ಷರಾದ ಕುಲ್ಲಚಂಡ ಸಾಬಾ ಕರುಂಬಯ್ಯ, ಸ್ಥಳೀಯರಾದ ಝಕರಿಯ , ಆಟೋ ಚಾಲಕರಾದ, ಸಿದ್ದಿಕ್, ತಿಮ್ಮಯ್ಯ,ಹಂಸ, ಲೋಕೇಶ್, ಮಮ್ಮುಟ್ಟಿ ಸುನಿಲ್ ಉಪಸ್ಥಿತರಿದ್ದರು.
ವರದಿ: ನೌಫಲ್ ಕಡಂಗ