ನಾಪೋಕ್ಲು : ನಾಪೋಕ್ಲು ಕೊಡವ ಸಮಾಜದ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಾಲಿ ಅಧ್ಯಕ್ಷರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ನಾಪೋಕ್ಲು ಕೊಡವ ಸಮಾಜ ಆರಂಭದಲ್ಲಿ ನಡೆದುಕೊಂಡು ಬಂದಿರುವ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದರು.
ಬಳಿಕ ನೂತನ ಅಧ್ಯಕ್ಷ ಮುಂಡಂಡ. ಸಿ. ನಾಣಯ್ಯ ಹಾಗೂ ಆಡಳಿತ ಮಂಡಳಿಯವರಿಗೆ ಸಮಾಜದ ಲೆಕ್ಕಪತ್ರ ಪುಸ್ತಕವನ್ನು ನೀಡಿ ಅಧಿಕಾರ ಅಸ್ತಾಂತರಿಸಿ ಶುಭಹಾರೈಸಿದರು.
ಅಧಿಕಾರ ವಹಿಸಿ ಮಾತನಾಡಿದ ಕೊಡವಾಸಮಾಜದ ನೂತನ ಅಧ್ಯಕ್ಷರಾದ ಮುಂಡಂಡ. ಸಿ. ನಾಣಯ್ಯ ಕೊಡವ ಜನಾಂಗದ ಹಾಗೂ ಕೊಡವ ಸಮಾಜದ ಅಭಿವೃದ್ಧಿಗೆ ಎಲ್ಲಾ ಆಡಳಿತ ಮಂಡಳಿಯವರನ್ನು ಒಟ್ಟುಗೂಡಿಸಿ ಮುನ್ನೆಡೆಸುವ ಭರವಸೆ ನೀಡಿದರು.
ಈ ಸಂದರ್ಭ ನೂತನ ಉಪಾಧ್ಯಕ್ಷರಾದ ಕರವಂಡ ಲವ ನಾಣಯ್ಯ, ಖಜಾಂಚಿ ಚೌರಿರ ಉದಯ, ಜಂಟಿ ಕಾರ್ಯದರ್ಶಿ ಮಾಚೇಟಿರ ಕುಸು ಕುಶಾಲಪ್ಪ, ಹಾಲಿ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಹಾಲಿ ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ ಸೇರಿದರತೆ ಹಾಲಿ ಹಾಗೂ ನೂತನ ನಿರ್ದೇಶಕರುಗಳು, ಸದಸ್ಯರು ಉಪಸ್ಥಿತರಿದ್ದರು.
ವರದಿ: ಝಕರಿಯ ನಾಪೋಕ್ಲು