ಕಕ್ಕಬೆ: ಕಕ್ಕಬೆ ಕೇಂದ್ರ ವಿದ್ಯಾ ಸಂಸ್ಥೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಂಜಿಲ ಗ್ರಾಮದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಸುಮಾರು 40 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
1 ರಿಂದ 4 ನೇ ತರಗತಿ ವಿಭಾಗದ ಸ್ಪರ್ಧೆಗಳಲ್ಲಿ ರಿಲಾ ಫಾತಿಮಾ (ಅಭಿನಯ ಗೀತೆ) ದ್ವಿತೀಯ, ಜಕೀಯ (ಧಾರ್ಮಿಕ ಪಠಣ) ದ್ವಿತೀಯ, ರನ ಫಾತಿಮಾ(ಕಥೆ ಹೇಳುವುದು) ದ್ವಿತೀಯ, ಹಾಗೂ ಮಿನ್ಹ ಕದೀಜಾ (ಛದ್ಮ ವೇಷ) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
5 ರಿಂದ 7 ನೇ ತರಗತಿ ವಿಭಾಗದಲ್ಲಿ ಅಫ್ನಾ (ಲಘುಸಂಗೀತ, ಭಕ್ತಿಗೀತೆ) ಪ್ರಥಮ, ರಿಂಶಾ ಫಾತಿಮಾ (ಇಂಗ್ಲಿಷ್ ಕಂಠಪಾಠ , ಅರೇಬಿಕ್ ಧಾರ್ಮಿಕ ಪಠಣ) ಪ್ರಥಮ, ಜಝಾ ಫಾತಿಮಾ (ಕಥೆ ಹೇಳುವುದು) ಪ್ರಥಮ, ನಿಧಾ (ಹಿಂದಿ ಕಂಠಪಾಠ) ಪ್ರಥಮ ಸ್ಥಾನವನ್ನು ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫರ್ಹಾನ್(ಮಿಮಿಕ್ರಿ)ದ್ವಿತೀಯ,ರಿಂಶಾ ಫಾತಿಮಾ (ಸಂಸ್ಕೃತ ಧಾರ್ಮಿಕ ಪಠಣ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರೌಢ ಶಾಲಾ ವಿಭಾಗದಲ್ಲಿ ಅಫ್ರೀದ್ (ಜನಪದ ಗೀತೆ)ದ್ವಿತೀಯ, ಶಹದಿಯಾ (ಭಾವಗೀತೆ)ದ್ವಿತೀಯ, ಇಜ್ಮಾ (ಚಿತ್ರ ಕಲೆ) ದ್ವಿತೀಯ, ಶಬೀರ್ ಮತ್ತು ಮುನಜಿಲ್ (ರಸಪ್ರಶ್ನೆ) ದ್ವಿತೀಯ, ಅನಸ್ (ರಂಗೋಲಿ) ದ್ವಿತೀಯ, ಹನ್ನತ್ (ಕನ್ನಡ ಭಾಷಣ)ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹನ್ನತ್ (ಇಂಗ್ಲಿಷ್ ಭಾಷಣ) ಪ್ರಥಮ, ಹಂಜ಼(ಅರೇಬಿಕ್ ಧಾರ್ಮಿಕ ಪಠಣ) ಪ್ರಥಮ, ಅಫ್ರಾ ಫರ್ವೀನ್ (ಆಶುಭಾಷಣ) ಪ್ರಥಮ,ಸಜ್ಞಾ (ಕವನ ವಚನ ) ಪ್ರಥಮ, ಶಫ್ನಾಜ್ (ಗಜಲ್) ಪ್ರಥಮ, ಅಮೀನ (ಛದ್ಮವೇಷ) ಪ್ರಥಮ ,ಅಫ್ರೀದ್ ಮತ್ತು ತಂಡ(ಕವ್ವಾಲಿ) ಪ್ರಥಮ,ಫೈಜ್ ಮತ್ತು ತಂಡ (ಜಾನಪದ ನೃತ್ಯ) ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಶಾಹಿದ್ ಅಲಿ, ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಂ. ಆಬಿದಾ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಝಕರಿಯ ನಾಪೋಕ್ಲು