Reading Time: 2 minutes
ಮೂರ್ನಾಡು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್.ಜೆ.ಎಂ ಮತ್ತು ಎಸ್.ಎಸ್.ಎಫ್ ಸಂಘಟನೆಗಳ ಸಂಯುಕ್ತಾಯಶ್ರಯದಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ಮೂರ್ನಾಡಿನಲ್ಲಿ ಹಮ್ಮಿಕೊಳ್ಳಲಾಯಿತು.
ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಎಮ್ಮೆಮಾಡಿನ ಸಯ್ಯದ್ ಇಲ್ಲಾಸ್ ಅಲ್ ಹೈದರೂಸಿ ಅವರ ಪ್ರಾರ್ಥನೆ ಮೂಲಕ ಮಿಲಾದ್ ಜಾಥಾ ಉದ್ಘಾಟನೆಗೊಂಡಿತು. ಮೂರ್ನಾಡು ರೇಂಜ್ ವ್ಯಾಪ್ತಿಯ 13 ತಂಡಗಳು, ದಫ್ ಮತ್ತು ಸ್ಕೌಟ್ ತಂಡಗಳು ಮೂರ್ನಾಡಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿದವು. ಮೆರವಣಿಗೆಯ ನಂತರ ಕೊಂಡAಗೇರಿಯ ಅಬ್ದುಲ್ಲ ಸಖಾಫಿ ಸಮಾರೋಪ ಭಾಷಣ ಮಾಡಿದರು. ಸಿ.ಜೆ.ಯುನ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕೋಶಾಧಿಕಾರಿ ಹುಸೇನ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್‌ನ ಕಾರ್ಯಧ್ಯಕ್ಷ ಯೂಸುಫ್ ಅಲಿ ಕೊಂಡAಗೇರಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ಕುಂಜಿಲ, ನಿರ್ವಹಣಾ ಸಮಿತಿ ಚೇರ್‌ಮೇನ್ ಮುನೀರ್ ಮಹ್ಲರಿ ಕನ್‌ವೀರ್ ಶಂಸುದ್ದೀನ್ ಅಮ್ಜದಿ, ಎಸ್.ವೈ.ಎಸ್‌ನ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಹದಿ, ಎಸ್.ಜೆ.ಎಂ ಜಿಲ್ಲಾ ನಾಯಕ ಅಬ್ದುಲ್ಲ ಸಖಾಫಿ ಕೊಳಕೇರಿ, ಎಸ್.ಎಸ್.ಎಫ್‌ನ ಜಿಲ್ಲಾಧ್ಯಕ್ಷ ಝಬೈರ್ ಸಹಿದಿ, ರಾಷ್ಟಿçÃಯ ಕಾರ್ಯದರ್ಶಿ ಯಾಕುಬ್ ಕೊಳಕೇರಿ ಮತ್ತಿತರ ಪ್ರಮುಖರು ಜಾಥಾದಲ್ಲಿ ಪಾಲ್ಗೊಂಡಿದ್ದರು. ರೇಂಜ್ ಅಧ್ಯಕ್ಷ ಹನೀಫ್ ಸಖಾಫಿ ಕೊಂಡAಗೇರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮೂರ್ನಾಡಿನ ಮೈಮಾ ಸಂಘಟನೆಯಿAದ ಜಾಥಾದಲ್ಲಿ ಪಾಲ್ಗೊಂಡವರಿಗೆ ನೀರು ಮತ್ತು ತಂಪು ಪಾನೀಯಗಳನ್ನು ವಿತರಿಸಲಾಯಿತು.
ಚಿತ್ರ & ವರದಿ: ಟಿ.ಸಿ. ನಾಗರಾಜ್, ಮೂರ್ನಾಡು