ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಎಮ್ಮೆಮಾಡು ಸಂಯುಕ್ತ ಆಶ್ರಯದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್, ಅಸ್ಮಾಉಲ್ ಹುಸ್ನ ಹಾಗೂ 10 ನೇ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ನಡೆಯಿತು.
ದಿನಾಂಕ 14/10/2023 ರಂದು ಬೆಳಿಗ್ಗೆ ಮಖಾಂ ಝಿಯಾರತ್ ಹಾಗೂ ಧ್ವಜಾರೋಹಣವನ್ನು ಸೈಯ್ಯಿದ್ ಅಬ್ದುಲ್ ಅಝೀಝ್ ತಂಞಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆ 4 ಗಂಟೆಗೆ ವರ್ಣರಂಜಿತ ಪ್ರವಾದಿ ಸಂದೇಶ ರಾಲಿ ನಡೆಯಿತು. ಸೈಯ್ಯಿದ್ ಝಕರಿಯಾ ಸಅದಿ ಅವರ ಸಂದೇಶ ಭಾಷಣದೊಂದಿಗೆ ಸಂದೇಶ ರ್ಯಾಲಿ ಮುಕ್ತಾಯಗೊಂಡಿತು. ರಾತ್ರಿ ಅಸ್ಮಾಉಲ್ ಹುಸ್ನಾ ರಾತೀಬ್ ನೆಡೆಸಲಾಯಿತು ಸೈಯ್ಯಿದ್ ಅಬ್ದುಲ್ ಅಝೀಝ್ ತಂಞಳ್ ನೇತೃತ್ವದಲ್ಲಿ ಜರುಗಿತು .
ಹುಬ್ಬುರ್ರಸೂಲ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ವನ್ನು ಹುಸೈನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸೈಯ್ಯಿದ್ ನುಹ್ಮಾನ್ ಸಅದಿ ಉದ್ಘಾಟಿಸಿದರು ಕೇರಳದ ಪ್ರಸಿದ್ಧ ವಿದ್ವಾಂಸ ಹಂಝ ಮಿಸ್ಬಾಹಿ ಓಟಪದವು ಪ್ರಭಾಷಣ ನಡೆಸಿದರು . ಸಮಾರೋಪ ಸಮಾರಂಭದಲ್ಲಿ ಡಾಕ್ಟರ್ ಸೈಯ್ಯಿದ್ ಶಿಹಾಬುದ್ದೀನ್ ಅಹ್ದಲ್ ಅಲ್ ಹಾಸಿಮಿ ಮುತ್ತನ್ನೂರು ತಂಗಳ್ ನೇತೃತ್ವ ವಹಿಸಿದ್ದರು.
ವೇದಿಕೆಯಲ್ಲಿ ಉಸ್ಮಾನ್ ಹಾಜಿ ಬೆಲಿಯತ್, ಝುಬೈರ್ ಸಅದಿ ಮಲ್ದಾರೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಅಧ್ಯಕ್ಷರು, ಮುಹಮ್ಮದ್ ಹಾಜಿ ಕುಂಜಿಲ ಕಾರ್ಯದರ್ಶಿ ಮುಸ್ಲಿಂ ಜಮಾಅತ್ ಕೊಡಗು , ಹಾಗೂ ಹಲವಾರು ಸಂಘಟನೆಯ ನೇತಾರರು ಪಾಲ್ಗೊಂಡಿದ್ದರು. ಇಬ್ರಾಹಿಂ ಸಅದಿ ಸ್ವಾಗತಿಸಿ ನಿಝಾರ್ ಜಾಹರಿ ವಂದನಾರ್ಪಣೆ ನಿರ್ವಹಿಸಿದರು
ವರದಿ: ನೌಫಲ್ ಕಡಂಗ