ಚೆಯ್ಯ0ಡಾಣೆ: ಕೊಡಗಿನ ಸುನ್ನಿ ಪ್ರವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿ ವತಿಯಿಂದ ಪ್ರತಿ ವರ್ಷ ನಡೆಸಿ ಕೊಂಡು ಬರುವ ಮೀಲಾದ್ ಸಮಾವೇಶ ಈ ವರ್ಷವೂ ಅತಿ ವಿಜೃಂಭಣೆಯಿಂದ ಇತ್ತೀಚಿಗೆ ರಿಯಾದ್ ನಲ್ಲಿರುವ ಅಲ್ ಮಾಸ್ ಆಡಿಟೋರಿಯಮಿನಲ್ಲಿ ನಡೆಯಿತು.
ಬುರ್ದಾ ಮತ್ತು ಮೌಲಿದ್ ಮಜ್ಲಿಸ್ ನೊಂದಿಗೆ ಹಂಸ ಮುಸ್ಲಿಯಾರ್ ಮಾಪಿಳತ್ತೋಡು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳ ಕಾರ್ಯಕ್ರಮ ಹಾಗೂ ಮೀಲಾದ್ ಸಮಾವೇಶ ನಡೆಸಲಾಯಿತು. ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸೌದಿ ಪ್ರವಾಸದಲ್ಲಿರುವ ಮರ್ಕಝುಲ್ ಹಿದಾಯ ಪ್ರಧಾನ ಅಧ್ಯಾಪಕರಾದ ಅಸ್ಕರ್ ಸಖಾಫಿ ಖಿರಾಅತ್ ಪಠಿಸಿದರು ಮರ್ಕಝುಲ್ ಹಿದಾಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅವರು ಉದ್ಘಾಟಿಸಿದ ಸಮಾರಂಭದಲ್ಲಿ ಮುಹಮ್ಮದಲಿ ಸಖಾಫಿ ಒಳಮದಿಲ್ ಮುಖ್ಯ ಪ್ರಭಾಷಣ ಮಾಡಿದರು, ಮುಹಮ್ಮದ್ ಪೈಗಂಬರ್ (ಸ) ಶಾಂತಿಯ ಪ್ರತಿರೂಪ ಎಂಬ ವಿಷಯದಲ್ಲಿ ಹುಬ್ಬು ರ್ರಸೂಲ್ ಪ್ರಭಾಷಣ ಮಾಡಿ ಮುಹಮ್ಮದ್ ಪೈಗಂಬರ್ (ಸ) ರವರು ಹೇಳಿದರು ಎಲ್ಲಾ ಜಾತಿ ಧರ್ಮದವರಲ್ಲಿ ಶಾಂತಿಯಿಂದ ವರ್ತಿಸಬೇಕು ಎಂದು ಹಿತ ವಚನ ನೀಡಿದರು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಜಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಂಸ ಮಾನಿ ಕುಂಜಿಲ ಮಾತನಾಡಿ ಸೌದಿ ಪ್ರವಾಸಿಗಳು ಕೊಡಗಿನ ಪ್ರಳಯ, ಕೊರೋನಾ, ಹಾಗೂ ಕೊಡಗಿನಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಜಾತ್ಯಾತೀತವಾಗಿ ಸಹಾಯ ಹಸ್ತವನ್ನು ನೀಡಿದ ಬಗ್ಗೆ ಸಭಿಕರಿಗೆ ತಿಳಿಸಿ ಇನ್ನು ಮುಂದುಕ್ಕೂ ಕೊಡಗಿಗೆ ಬೇಕಾಗಿ ನಾವೆಲ್ಲರೂ ತನು ಮನುಗಳಿಂದ ಸಹಕರಿಸಬೇಕು ಎಂದು ಸಭಿಕರಿಗೆ ತಿಳಿಸಿದರು.
ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್ )ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಶುಭ ಹಾರೈಕೆ ಭಾಷಣ ಮಾಡಿದರು, ವೇದಿಕೆಯಲ್ಲಿ ಇ ಸಿ ಕಾರ್ಗೋ ಮಾಲೀಕರಾದ ಅಶ್ರಫ್ ಎಮ್ಮೆಮಾಡು, ದಾರುನ್ನಜಾತ್ ನೆಲ್ಲಿಹುದಿಕೇರಿ ಜಿಸಿಸಿ ಅಧ್ಯಕ್ಷರಾದ ಅಝೀಝ್ ನೆಲ್ಲಿಹುದಿಕೇರಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಝೋನ್ ಅಧ್ಯಕ್ಷರಾದ ನಝೀರ್ ಗುಂಡಿಕೆರೆ ಕೆಸಿಎಫ್ ಝೋನಲ್ ನೇತಾರರಾದ ದಾವೂದ್ ಸಅದಿ, ಅನ್ವಾರುಲ್ ಹುದಾ ರಿಯಾದ್ ಸಮಿತಿಯ ಅಧ್ಯಕ್ಷರಾದ ರಫೀಕ್ ತಂಙಳ್ ಮಾಲ್ತಾರೆ ಹಿರಿಯರಾದ ಹಮೀದ್ ಕೋಟಯಂ, ಕುಂಜಿಲ ಪೈನರಿ ಯುವಕರ ಸಂಘಟನೆಯಾದ ಕೆಎಸ್ಎ ಸಮಿತಿಯ ಅಧ್ಯಕ್ಷರಾದ ಫೈಝಲ್ ಕುಂಜಿಲ ಕುಂಡಂಡ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಂಸುದ್ದೀನ್ ತಕ್ಕಪಳ್ಳಿ ಹೊದವಾಡ, ಶರೀಫ್ ಕೂಡಿಗೆ ನೇತೃತ್ವವನ್ನು ವಹಿಸಿದರು , ರಾಷ್ಟ್ರೀಯ ಸಮಿತಿ ನೇತಾರರಾದ ಮುಸ್ತಫ ಕಡಂಗ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮುಸ್ತಫ ಝೈನಿ ಕಂಬಿಬಾಣೆ ನಿರೂಪಿಸಿ ರಫೀಕ್ ನೆಲ್ಲಿಹುದಿಕೇರಿ ವಂದಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ