ನವೆಂಬರ್ 23 ರಿಂದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟ
ಚೆಯ್ಯ0ಡಾಣೆ, ಅ 25.
ಸ್ಥಳೀಯ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ನವಂಬರ್ 23 ರಿಂದ 25 ರವರೆಗೆ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪನವರು ಕ್ಲಬ್ ನಾ ಕಛೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ 3 ದಿನಗಳ ಕಾಲ ಪಂದ್ಯಾಟ ನಡೆಯಲಿದೆ.
ಪ್ರಥಮ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ (ನಮ್ಮೆ) ಪಾಂಡಂಡ ಕಪ್ ನಡೆದ ಹೆಗ್ಗಳಿಕೆಗೆ ಪಾತ್ರ ವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕರಡದಲ್ಲಿ ನಡೆಯುವ ಈ ಹಾಕಿ ಪಂದ್ಯಾವಳಿಯಲ್ಲಿ ಕಡಿಯತ್ ನಾಡಿಗೆ ಒಳಪಟ್ಟ ಗ್ರಾಮಗಳು ಭಾಗವಹಿಸಲು ಅವಕಾಶವಿದ್ದು ಪಾಲ್ಗೊಳ್ಳುವ ತಂಡಗಳು ನವೆಂಬರ್ 10 ರ ಒಳಗೆ ಹೆಸರನ್ನು ನೋಂದಾಯಿಸ ಬಹುದಾಗಿದೆ ಎಂದು ಅಧ್ಯಕ್ಷ ಬಿದ್ದಪ್ಪನವರು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೆಸರು ನೋಂದಾಯಿಸಲು :
9686445779(ಪ್ರಕಾಶ್ ),6360591530 (ಸುಧಾ ) 9449255167 (ಮಧು) ಇವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಿ.
ಈ ಸಂದರ್ಭ ಕ್ಲಬ್ ನ ಕಾರ್ಯದರ್ಶಿ ಗಣಪತಿ, ಕೋಶಾಧಿಕಾರಿ ಹಾಗೂ ಗ್ರಾ.ಪಂ. ಸದಸ್ಯ ವಿಲಿನ್, ಉಪಾಧ್ಯಕ್ಷ ಚರ್ಮಣ,ಭೀಮಯ್ಯ,ಅಚ್ಚಪ್ಪ, ಕಿಶನ್,ಪ್ರಕಾಶ್,ಸೋಮಯ್ಯ, ಅರ್ಜುನ್, ಸುಧಾ,ಸುಷ ಮೊಣ್ಣಯ್ಯ,ಕುಶಾಲಪ್ಪ,ಸುದಿ ಹಾಗೂ ಸದಸ್ಯರು ಹಾಜರಿದ್ದರು.