ಕಡಂಗದಲ್ಲಿ ಎಸ್ ವೈ ಎಸ್: ರಾಜ್ಯ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮ .

Reading Time: 3 minutes

ಕಡಂಗದಲ್ಲಿ ಎಸ್ ವೈ ಎಸ್: ರಾಜ್ಯ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮ .

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಚೆಯ್ಯ0ಡಾಣೆ ಅ 26.
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್‌ವೈ‌ಎಸ್) 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ “ಪರಂಪರೆಯ ಪ್ರತಿನಿಧಿಗಳಾಗೋಣ”ಎಂಬ ಧ್ಯೇಯ ವಾಕ್ಯದಡಿಯಲ್ಲಿ
2024 ರ ಜನವರಿ 24 ರಂದು ಮಂಗಳೂರಿನಲ್ಲಿ ನಡೆಯಲಿರುವ ಮಹಾ ಸಮ್ಮೇಳನದ ಪ್ರಚಾರಾರ್ಥ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ರಾಜ್ಯ ಸಮಿತಿ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮವು ಕಡಂಗ ಬದ್ರಿಯಾ ಮದರಸ ಸಭಾಂಗಣದಲ್ಲಿ ಯಶಸ್ವಿ ಯಾಗಿ ಜರುಗಿತು.

ಎಸ್ ವೈ ಎಸ್ 30 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಸಮಾಜ ಸೇವೆ, ಸಾಮಾಜಿಕ ಕಾರ್ಯಕ್ರಮಗಳನ್ನು ವಿವಿಧ ಘಟಕಗಳಲ್ಲಿ ಹಮ್ಮಿಕೊಂಡಿದ್ದು, ಅವುಗಳೆಲ್ಲವನ್ನೂ ಕಾರ್ಯರೂಪಕ್ಕೆ ತಂದು ಯಶಸ್ವಿಗೊಳಿಸಿ ಸೇವಾ ಮನೋಭಾವವಿರುವ ಉತ್ತಮ ಶಿಸ್ತುಬದ್ದ ಕಾರ್ಯಕರ್ತರನ್ನು ಒಗ್ಗೂಡಿಸುವ ಮನೋಭಾವದಿಂದ ಮಂಗಳೂರಿನಲ್ಲಿ ನಡೆಯುವ 30 ನೇ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫೀಲ್ ಸ‌ಅದಿ ಕೊಳಕೇರಿ ಕರೆ ನೀಡಿದರು.

ಜಿಲ್ಲಾಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್‌ ಅಧ್ಯಕ್ಷತೆ ವಹಿಸಿದರು.

ಎಸ್ ವೈ ಎಸ್ ರಾಜ್ಯ ಕೋಶಾಧಿಕಾರಿ ಅಡ್ವಕೇಟ್ ಹಂಝತ್ ಉಡುಪಿ ಮಾತನಾಡಿ ರಾಜ್ಯ ನಾಯಕರ ನಡೆ ಹಳ್ಳಿಯ ಕಡೆಯಾಗಿದೆ ಏಕೆಂದರೆ ರಾಜ್ಯ ನಾಯಕರ ಹೆಸರನ್ನು ಎಲ್ಲರು ಕೇಳಿರಬಹುದು ಅದರೆ ಅವರ ಪರಿಚಯ ಯಾರಿಗೂ ಇರಲ್ಲ ಅದರ ಉದ್ದೇಶದಿಂದ ರಾಜ್ಯ ನಾಯಕರು ಖುದ್ದು ಯುನಿಟ್ ಹಾಗೂ ಝೋನ್ ಗಳಿಗೆ ಭೇಟಿನೀಡಿ ಎಸ್ ವೈ ಎಸ್ 30ನೇ ಮಹಾ ಸಮ್ಮೇಳನ ಅಭೂತಪೂರ್ಣ ಯಶಸ್ವಿಯಾಗಿಸುವಂತೆ ಪ್ರತಿಯೊಬ್ಬ ಕಾರ್ಯಕರ್ತನು ಉಮ್ಮಸಿನಿಂದ ಶ್ರಮೀಸ ಬೇಕೆಂದರು.

ಎಸ್ ವೈ ಎಸ್ ರಾಜ್ಯ ಮಾಧ್ಯಮ ಸಲಹೆಗಾರ ಹಸೈನಾರ್ ಆನೆಮಹಲ್ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಸಾಮಾಜಿಕ ಜಾಲತಾಣಗಲಾದ ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳನ್ನು ಸದುಪಯೋಗ ಪಡಿಸಿಕೊಂಡು ಪ್ರಚಾರಪಡಿಸ ಬೇಕೆಂದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್,
ದ‌ಅವಾ ವಿಭಾಗ ಕಾರ್ಯದರ್ಶಿ ಸಯ್ಯದ್ ಶಾಫಿ ನ‌ಈಮಿ ತಂಗಳ್,ಸಾಂತ್ವನ ವಿಭಾಗ ಕಾರ್ಯದರ್ಶಿ ಕೊಡಗು ಜಿಲ್ಲಾ ಉಸ್ತುವಾರಿ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಗಳ್ ಎಮ್ಮೆಮಾಡು ಹಾಗೂ ಮತ್ತಿತರ ರಾಜ್ಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮೀಸುವಂತೆ ಕರೆ ನೀಡಿ ಮಾತನಾಡಿದರು.

ಇದಕ್ಕೂ ಮೊದಲು ಮುಖ್ಯ ರಸ್ತೆಯಿಂದ ರಾಜ್ಯ ನಾಯಕರುಗಳಿಗೆ ಬದ್ರಿಯಾ ಮಸೀದಿ,ಕೆಎಂಜೆ,ಎಸ್ ವೈ ಎಸ್, ಎಸ್ ಎಸ್ ಎಫ್, ಮದರಸ ವಿದ್ಯಾರ್ಥಿಗಳು,ಸುನ್ನಿ ಸಂಘ ಕುಟುಂಬದ ಸದಸ್ಯರು ದಫ್ ಪ್ರದರ್ಶನದ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಈ ಸಂದರ್ಭ ಮುನೀರ್ ಮಲ್ಹರಿ,ಮುಜೀಬ್, ಶಂಸುದ್ದಿನ್ ಅಮ್ಜದಿ,ಬದ್ರಿಯಾ ಜಮಾಅತ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಅರಫಾ,ಕೆಎಂಜೆ ಕಡಂಗ ಅಧ್ಯಕ್ಷ ಸುಲೈಮಾನ್, ಎಸ್ ವೈ ಎಸ್ ಅಧ್ಯಕ್ಷ ಅಶ್ರಫ್,ಸಲಾಂ,ಹನೀಫ್ ರಹ್ಮನಿ,ಅಶ್ರಫ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.

ಎಸ್ ವೈ ಎಸ್ ಕೊಡಗು ಜಿಲ್ಲಾ ಕಾರ್ಯದರ್ಶಿ ಅಹಮದ್ ಮದನಿ ಸ್ವಾಗತಿಸಿ ಯಾಕೂಬ್ ಮಾಸ್ಟರ್ ವಂದಿಸಿದರು.

ಅಶ್ರಫ್

5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments