ಕುಂಜಿಲ ಪಯ್ ನರಿ ಸುನ್ನೀ ಮುಸ್ಲಿಂ ಜಮಾಅತ್ ಹಾಗೂ ಕುಂಜಿಲ ಬ್ಲಾಕ್ ಕಾಂಗ್ರೆಸ್ ನ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಆಲಿ ವಹಿಸಿದರು. ಕುಂಜಿಲ ಪೈನರಿ ಜಮಾಅತ್ ಖತೀಬರಾದ ನಿಝಾರ್ ಅಹ್ಸನಿ ಕಕ್ಕಿಡಿಪುರಂ ಪ್ರಾರ್ಥನೆ ನೆರವೇರಿಸಿದರು. ವೈ.ಕೆ. ಹಂಝ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಕುಂಜಿಲ, ಪೈನರಿ, ಕಕ್ಕಬೆ ಸಂಪರ್ಕ ಕಲ್ಪಿಸುವ ರಸ್ತೆ ಟೆಂಡರ್ ಕರೆಯಲಾಗಿದೆ, ಅತೀ ಶೀಘ್ರದಲ್ಲೇ ಕಾಮಗಾರಿ ಆರಂಭಸಲಾಗುದು. ಪೈನರಿ ಮಸೀದಿ ಹಾಗೂ ಸ್ಮಶಾನ ಜಾಗದ ಸುತ್ತ ತಡೆಗೋಡೆಗೆ ಅನುದಾನ ಶೀಘ್ರ ಬಿಡುಗಡೆ ಗೊಳಿಸಲಾಗುವುದು ಎಂದರು. ಮೂಲಭೂತ ಸೌಲಭ್ಯಗಳನ್ನು ತಾರತಮ್ಯ ವಿಲ್ಲದೆ ಅರ್ಹರಿಗೆ ತಲುಪಿಸುವ ಭರವಸೆ ನೀಡಿ, ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಈ ವ್ಯಾಪ್ತಿಯ ಜನರಲ್ಲಿ ಮನವಿ ಮಾಡಿದರು.
ಇದೆ ಸಂದರ್ಭ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಕೊಡಗು ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲವ ಚಿಣ್ಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಗ್ರಾ.ಪಂ.ಸದಸ್ಯರಾದ ಬಶೀರ್ ಪೂಯಕ್ಕರೆ, ರಜಾಕ್ ಕುಂಡಂಡ, ಬಾಚ್ಚಮಂಡ ರಾಜ ಪೂವಣ್ಣ,ಕುಡಿಯರ ಮುತ್ತಪ್ಪ,, ಮುಸ್ತಫಾ ಬಾರಿಕೆ, ಮೂಸ ಪತ್ತಂಗೋಡ್, ಉಸ್ಮಾನ್ ವಯಕೋಲ್, ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ನ ಆಡಳಿತ ಮಂಡಳಿ ಹಾಗೂ ಸಲಹಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಾಗೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದರು. ಸ್ವಾಗತವನ್ನು ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಎ.ಎ. ಮೊಹಮ್ಮದ್ ಹಾಜಿ ಹಾಗೂ ವಂದನೆಯನ್ನು ಕಾರಂಗೋಡ್ ಹಾರಿಸ್ ನಡೆಸಿದರು.