ನಾಪೋಕ್ಲು : ನಾಪೋಕ್ಲು ಬಳಿಯ ಕೊಟ್ಟಮುಡಿ ಮರ್ಕಝ್ ವಿದ್ಯಾ ಸಂಸ್ಥೆಯ ಅಧಿನದಲ್ಲಿ ಕಾರ್ಯಚರಿಸುವ ಮರ್ಕಜ್ ಪಬ್ಲಿಕ್ ಪ್ರೌಢ ಶಾಲೆಯ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಿಶೇಷ ವಿಕಲ ಚೇತನ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಒಂದು ದಿನ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾದರು.
ಮರ್ಕಝ್ ಪ್ರೌಢ ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕ್ಷೇತ್ರ ಭೇಟಿಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ಪ್ರಯುಕ್ತ ಪಾಲಿಬೆಟ್ಟದ ‘ಚೆಷೈರ್ ಹೋಮ್ ಇಂಡಿಯಾ’ವಿಶೇಷ ವಿಕಲ ಚೇತನ ವಿದ್ಯಾರ್ಥಿಗಳ ಶಾಲೆಗೆ ಭೇಟಿ ನೀಡಿ ಅಲ್ಲಿನ ಸುಮಾರು 50ಕ್ಕೂ ಹೆಚ್ಚು ವಿಕಲ ಚೇತನ ವಿದ್ಯಾರ್ಥಿಗಳ ಜೊತೆ ಅವರ ದೈನಂದಿನ ಚಟುವಟಿಕೆಗಳೊಂದಿಗೆ ಭಾಗಿಯಾಗಿ ಅವರಿಗೆ ಹರ್ಷ ತುಂಬಿದರು.
ಮರ್ಕಝ್ ವಿದ್ಯಾರ್ಥಿಗಳೆಲ್ಲರು ಕಾರ್ಯಕ್ರಮದ ಅಂಗವಾಗಿ ವಿಕಲಚೇತನ ವಿದ್ಯಾರ್ಥಿಗಳಿಗೆ ಬೋಧನಾ ಕಲಿಕಾ ಸಾಮಗ್ರಿಗಳನ್ನು ನೀಡುವುದರ ಮೂಲಕ ತಮ್ಮ ಸಹಾಯ ಹಸ್ತವನ್ನು ಚಾಚಿದರು.
ಶಾಲೆಯ ಶಿಕ್ಷಕರಾದ ಉಸ್ಮಾನ್, ದೈಹಿಕ ಶಿಕ್ಷಕರಾದ ನಾಸಿರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭ ಶಿಕ್ಷಕಿಯರಾದ ಆಶಾ,ರೆಹನಾ,ಗೀತಾ ಮತ್ತಿತರರು ಹಾಜರಿದ್ದರು.