23 ರಿಂದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟ
ಒಟ್ಟು 11 ಬಲಿಷ್ಠ ತಂಡಗಳ ಹೋರಾಟ
ಪಂದ್ಯಾಟಕ್ಕೆ ಸಜ್ಜು ಗೊಳ್ಳುತ್ತಿರುವ ಮೈದಾನ
ಚೆಯ್ಯ0ಡಾಣೆ ನ 20.
ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ಇದರ ವತಿಯಿಂದ ನ.23 ರಿಂದ 25 ರವರೆಗೆ ಮೊದಲ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪನವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರಡದಲ್ಲಿರುವ ಪ್ರಾಥಮಿಕ ಶಾಲಾ ಮೈದಾನದ ಸಭಾಂಗಣದಲ್ಲಿ ಕರೆಯಲಾಗಿದ್ದ
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ 3 ದಿನಗಳ ಕಾಲ ಪಂದ್ಯಾಟ ನಡೆಯಲಿದೆ.
ಪ್ರಥಮ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಪಾಂಡಂಡ ಕಪ್ ನಡೆದ ಹೆಗ್ಗಳಿಕೆಗೆ ಪಾತ್ರ ವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕರಡದಲ್ಲಿ ನಡೆಯುವ ಈ ಹಾಕಿ ಪಂದ್ಯಾವಳಿಯಲ್ಲಿ ಕಡಿಯತ್ ನಾಡಿಗೆ ಒಳಪಟ್ಟ ಗ್ರಾಮಗಳ 11 ತಂಡಗಳು ಹೆಸರು ನೊಂದಾಯಿಸಿದೆ ಎಂದರು.
ಕ್ರೀಡಾಕೂಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬೇಪುಡಿಯಂಡ ವಿಲಿನ್ ಸುದ್ದಿ ಗೋಷ್ಠಿಯಲ್ಲಿ ಮಾಹಿತಿನೀಡಿ ಪ್ರಪ್ರಥಮ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಆಯೋಜನೆಯಾದ ಕರಡ ಮೈದಾನದಲ್ಲಿ ಮತ್ತೊಮ್ಮೆ ಕ್ರೀಡಾಕೂಟ ನಡೆಯುತ್ತಿರುದು ಹೆಮ್ಮೆ, ಒಟ್ಟು 11:ತಂಡಗಳು ಭಾಗವಹಿಸಲಿದ್ದು ವಿಜೇತ ತಂಡಕ್ಕೆ 30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ 20 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
23ರಂದು ಉದ್ಘಾಟನಾ ಪಂದ್ಯಾಟವನ್ನು ಕಡಂಗ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚೆಯ್ಯ0ಡ ಲೀಲಾವತಿ ಉದ್ಘಾಟಿಸಲಿದ್ದಾರೆ.
ಫೈನಲ್ ಪಂದ್ಯಾಟ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವು ಕೊಡವ ಕಲ್ಚರಲ್ ರಿಕ್ರಿಯೇಷನ್ ಕ್ಲಬ್ ನ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜೀಕುಟ್ಟಿರ ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಮೆದುರ ಗಣು ಕುಶಾಲಪ್ಪ, ಬ್ರಿಗೇಡಿಯರ್ ಪಟ್ರಪಂಡ ಮೊಣ್ಣಪ್ಪ ಕೊಟ್ಟೋಳಿ,ರೀನಾ ಸುವರ್ಣ ಎಸಿಪಿ ಬೆಂಗಳೂರು,ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಸುದು ಬೋಪ್ಪಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ,ಉಪಾಧ್ಯಕ್ಷ ಬೆಲ್ಲು ಚರ್ಮಣ,ಭೀಮಯ್ಯ,ಅಚ್ಚಪ್ಪ, ಚಂಗಂಡ ಕಿಶನ್,ಪಾಂಡಂಡ ಕಿಶನ್, ಪ್ರಕಾಶ್, ಸುಧಾ,ಮದು ಮಾದಯ್ಯ ,ಅಚ್ಚಯ್ಯ, ಅರುಣ್, ಪೂವಣ್ಣ, ಲೋಯಿತ್, ಮಿಥುನ್, ದೇವಯ್ಯ ಹಾಗೂ ಸದಸ್ಯರು ಹಾಜರಿದ್ದರು.