ನಾಪೋಕ್ಲು : ನಾಪೋಕ್ಲುವಿನ ಪ್ರತಿಷ್ಠಿತ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾದ 8ನೇ ವರ್ಷದ ನಾಪೋಕ್ಲು ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಆರ್‌ಎಂಹೆಚ್ ಫ್ರೆಂಡ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ನಾಪೋಕ್ಲು ಬಳಿಯ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಆಕರ್ಷಕ ಫೈನಲ್ ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ಯೂನಸ್ ಮಾಲೀಕತ್ವದ ಮ್ಯಾಗ್ನಮ್ ಫ್ರೆಂಡ್ಸ್ ತಂಡವನ್ನು ಮಣಿಸಿ ರಶೀದ್ ಮಾಲೀಕತ್ವದ ಆರ್ ಎಂಎಚ್ ತಂಡ ನಗದು ಮತ್ತು ಆಕರ್ಷಕ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಮ್ಯಾಗ್ನಮ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ಒಟ್ಟು 5ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಪಂದ್ಯಾವಳಿಯ ತೀರ್ಪುಗಾರರಾಗಿ ಕರೀಂ ಕಡಂಗ, ನಾಪೋಕ್ಲುವಿನ ಅಬ್ಬಾಸ್ ಮತ್ತು ಹನೀಫ್ ಕಾರ್ಯನಿರ್ವಹಿಸಿದರು.ನಾಪೋಕ್ಲುವಿನ ಇರ್ಷಾದ್ ಮತ್ತು ಬಾದುಷಾ ವೀಕ್ಷಕ ವಿವರಣೆನೀಡಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ. ಇಸ್ಮಾಯಿಲ್, ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಹೊದ್ದೂರು ಗ್ರಾ. ಪಂ. ಸದಸ್ಯ ಮೊಯ್ದುಕೊಟ್ಟಮುಡಿ,ಆರ್ ಟಿ ಐ ಕಾರ್ಯಕರ್ತ ಹಾರಿಸ್,ಡೆಕ್ಕನ್ ಯೂತ್ ಕ್ಲಬ್ಬಿನ ಅಧ್ಯಕ್ಷ ಮನ್ಸೂರ್, ಉಪಾಧ್ಯಕ್ಷ ಉಬೈದ್, ಆಯೋಜಕರಾದ ಫೈಝಲ್,ಹಿರಿಯ ಸದಸ್ಯರಾದ ಪಿ.ಎಂ.ಆಬಿದ್,ಆಸ್ಕರ್ ಸೈಟ್, ಗಫೂರ್, ಎಂ.ಇ.ಹಾರಿಸ್, ಶುಕೂರ್,ಜಬ್ಬಾರ್,ಡೆಕ್ಕನ್ ಯೂತ್ ಕ್ಲಬ್ಬಿನ ಪದಾಧಿಕಾರಿಗಳು, ಪಂದ್ಯಾವಳಿಯಲ್ಲಿ ಪಾಲ್ಗೊಂಡ ವಿವಿಧ ತಂಡಗಳ ಸದಸ್ಯರು ಮತ್ತಿತರರು ಹಾಜರಿದ್ದರು.