ಕರಡದಲ್ಲಿ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ಚಾಲನೆ
ಗ್ರಾಮೀಣ ಕ್ರೀಡಾಕೂಟದಿಂದ ಉತ್ತಮ ಬಾಂದವ್ಯ ವೃದ್ಧಿ: ಕೋಡಿರ ಪ್ರಸನ್ನ ತಮ್ಮಯ್ಯ
ಪರಾಜಿತ ತಂಡಕ್ಕೆ ಟೈಸನ್ ಕೊಳಿ ಹಾಗೂ ಒಂದು ಕುಪ್ಪಿ ವಿಶೇಷ ಬಹುಮಾನ
ಚೆಯ್ಯ0ಡಾಣೆ ನ 23. ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ಇದರ ವತಿಯಿಂದ ಇಂದಿನಿಂದ 25 ರವರೆಗೆ ಮೊದಲ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಗ್ರಾಮೀಣ ಕ್ರೀಡಾಕೂಟದಿಂದ ಉತ್ತಮ ಬಾಂದವ್ಯ ವೃದ್ಧಿಯಾಗಲಿದೆ.ಕರಡ ಪ್ರಥಮ ಕೌಟುಂಬಿಕ ಪಂದ್ಯಾಟ ನಡೆದ ಹಗ್ಗಳಿಕೆ ಪಡೆದ ಮೈದಾನ ಇಲ್ಲಿ ಕಡಿಯತ್ ನಾಡ್ ಕಪ್ ಕೂಡ ಆಯೋಜಿಸಿದ್ದು ಸ್ಲಾಘನೀಯ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಡಂಗ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಅಭಿಪ್ರಾಯ ಪಟ್ಟರು.
ಇನ್ನೊರ್ವ ಮುಖ್ಯ ಅತಿಥಿ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚೆಯ್ಯ0ಡ ಲೀಲಾವತಿ ಮಾತನಾಡಿ ಗ್ರಾಮೀಣ ಕ್ರೀಡಾಕೂಟದಿಂದ ಜಿಲ್ಲಾ ಮಟ್ಟ, ರಾಜ್ಯಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಯುವ ಆಟಗಾರನ್ನು ಆಯ್ಕೆಮಾಡಲು ಸಹಕರಿಯಾಗಲಿದೆ ಎಂದುಪಂದ್ಯಾಟಕ್ಕೆ ಶುಭ ಹಾರೈಸಿದರು.
ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ 3 ದಿನಗಳ ಕಾಲ ನಡೆಯಲಿರುವ ಪಂದ್ಯಾಟ….
ಪರಾಜಿತ ತಂಡಕ್ಕೆ ಟೈಸನ್ ಕೊಳಿ ಹಾಗೂ ಒಂದು ಕುಪ್ಪಿ:
ಪಂದ್ಯಾಟದಲ್ಲಿ ಭಾಗವಹಿಸಿ ಪರಾಜಯ ಗೊಳ್ಳುವ ತಂಡಕ್ಕೆ ಐತಿಚಂಡ ಪ್ರಕಾಶ್ ಕಾರ್ಯಪ್ಪ ವಿಶೇಷ ಬಹುಮಾನವಾಗಿ ದೊಡ್ಡ ಗಾತ್ರದ ಟೈಸನ್ ಕೊಳಿ ಹಾಗೂ ಒಂದು ಕುಪ್ಪಿ ಯನ್ನು ನೀಡುತ್ತಿರುದು ಗ್ರಾಮೀಣ ಕ್ರೀಡಾಕೂಟಕ್ಕೆ ಮೇರಗನ್ನು ನೀಡಿದೆ. ಇಂತಹ ಒಂದು ವಿಶೇಷ ಬಹುಮಾನ ಕೊಡಗಿನಲ್ಲಿ ಪ್ರಥಮ ಎಂಬ ಹೆಗ್ಗಳಿಕೆ ಕೂಡ ಕರಡ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ಇದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ಅಧ್ಯಕ್ಷ ಬೇಪಡಿಯಂಡ ಬಿದಪ್ಪ ವಹಿಸಿದರು ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನಡೆಸಿದರು.
ಮುಖ್ಯ ಅತಿಥಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿದರು.ಸ್ವಾಗತವನ್ನು ಕ್ರೀಡಾಕೂಟ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾ.ಪಂ ಸದಸ್ಯ ಬೇಪಡಿಯಂಡ ವಿಲಿನ್ ನಡೆಸಿದರು.
ಈ ಸಂದರ್ಭ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಮೆದುರ ಗಣು ಕುಶಾಲಪ್ಪ,ಬೆಲ್ಲು ಚರ್ಮಣ ,ನೆರಪಂಡ ಗಾಂಧಿ ಮತಿತ್ತರರು ಉಪಸ್ಥಿತರಿದ್ದರು.
ಪಂದ್ಯಾಟ ವಿವರ:
ಪಂದ್ಯಾಟವನ್ನು ಮುಖ್ಯ ಅತಿಥಿ ಕೋಡಿರ ಪ್ರಸನ್ನ ತಮ್ಮಯ್ಯ ಹಾಕಿ ಸ್ಟಿಕ್ ನಿಂದ ಬಾಲ್ ಹೊಡೆಯುದರ ಮೂಲಕ ಉದ್ಘಾಟಿಸಿದರು.
ಉದ್ಘಾಟನೆ ಪಂದ್ಯದಲ್ಲಿ ಅರಪಟ್ಟು ತಂಡ ನರಿಯಂದಡ ತಂಡವನ್ನು 4-1 ಗೋಲು ಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಅರಪಟ್ಟು ತಂಡದ ಪಾಂಡಂಡ ನಾಣಯ್ಯ ಮೊದಲಗೋಲು ಬಾರಿಸಿದರೆ ನಂತರ ಕುಲ್ಲಚಂಡ ಜೋಯ್ 2, ಅತಿಥಿ ಆಟಗಾರ ಪ್ರಜ್ವಲ್ 1ಗೋಲು ಹೊಡೆದರೆ ನರಿಯಂದಡ ತಂಡದ ಕುಶಾಲಪ್ಪ 1 ಗೋಲು ಹೊಡೆದರು.
ಎರಡನೇ ಪಂದ್ಯದಲ್ಲಿ ಬಾವಲಿ ತಂಡ ಚೇಲಾವರ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.ಬಾವಲಿ ತಂಡದ ಪ್ರಜ್ವಲ್ 3, ಸುಗುಣ 1ಗೋಲು ಹೊಡೆದರೆ ಚೇಲಾವರ ತಂಡದ ದನು 1 ಗೋಲು ಹೊಡೆದರು.
ಮೂರನೇ ಪಂದ್ಯ ಕೈಕಾಡು ತಂಡ ಹಾಗೂ ಬ್ಲೂ ಸ್ಟಾರ್ ಕರಡ ತಂಡದ ನಡುವೆ ಫೀಲ್ಡ್ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲದ ಹೋರಾಟ ನಡೆಯಿತು ನಂತರ ಪೆನಾಲ್ಟಿ ಸೂಟ್ ಔಟ್ ನಲ್ಲಿ 4-3 ಗೋಲುಗಳಿಂದ ಕೈಕಾಡು ತಂಡ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ನಾಲ್ಕನೇ ಪಂದ್ಯದಲ್ಲಿ ಕಿರು0ದಾಡು ತಂಡ ಅರಪಟ್ಟು ತಂಡವನ್ನು 2-1 ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು
ಕಿರುಂದಾಡು ತಂಡದ ಹೇಮಂತ್ ಚಂಗಪ್ಪ 2 ಗೋಲು ಬಾರಿಸಿದರೆ ಅರಪಟ್ಟು ತಂಡದ ನಾಣಯ್ಯ ಒಂದು ಗೋಲು ಹೊಡೆದರು.
ಐದನೇ ಪಂದ್ಯದಲ್ಲಿ ಎಂ ವೈ ಸಿ ಕರಡ ತಂಡವನ್ನು ಬಾವಲಿ ತಂಡ 3-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು
ಬಾವಲಿ ತಂಡದ ಭೀಮಯ್ಯ 2 ಪ್ರಜ್ವಲ್ 1 ಗೋಲು ಹೋಡೆದರೆ ಎಂವೈಸಿ ಕರಡ ತಂಡದ ಪೂವಯ್ಯ ಪೆನಾಲ್ಟಿ ಸೂಟ್ ನಲ್ಲಿ 1 ಗೋಲು ಹೊಡೆದರು.
ತೀರ್ಪುಗಾರರಾಗಿ ಚೆಯ್ಯ0ಡ ಲವ ಅಪ್ಪಚ್ಚು,ಚೋಯಮಾಡ0ಡ ಚಂಗಪ್ಪ,ಚಂದಪಂಡ ಆಕಾಶ್, ಅಂಜಪರವಂಡ ಕುಶಾಲಪ್ಪ, ನೆಲ್ಲಮಕ್ಕಡ ಪವನ್ ಕಾರ್ಯ ನಿರ್ವಹಿದರೆ ವೀಕ್ಷಕ ವಿವರಣೆಯನ್ನು ವಿಖ್ಯಾತ ವೀಕ್ಷಕ ವಿವರಣೆಗಾರ ಚೆಪ್ಪುಡೀರ ಕಾರ್ಯಪ್ಪ ಹಾಗೂ ನೆರಪಂಡ ಆರ್ಷ ಮಂದಣ್ಣ ನಿರ್ವಹಿಸಿದರು.
ತಾ 24 ರ ಪಂದ್ಯ
8.30 ಗಂಟೆಗೆ ಕೊಕೇರಿ V/S ಕೈಕಾಡು
9.30 ಗಂಟೆಗೆ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ VS ಪಾಲಂಗಾಲ
10.30 ಗಂಟೆಗೆ ಕಿರು0ದಾಡು VS ಬಾವಲಿ
12 ಗಂಟೆಗೆ ಸೆಮಿಫೈನಲ್ ಪಂದ್ಯ ನಡೆಯಲಿದೆ.