ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾವಳಿ: ಕೊಕೇರಿ ಹಾಗೂ ಬಾವಲಿ ತಂಡ ಫೈನಲ್ ಗೆ ಲಗ್ಗೆ

ಕರಡದಲ್ಲಿ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾವಳಿ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಕೇರಿ ಹಾಗೂ ಬಾವಲಿ ತಂಡ ಫೈನಲ್ ಗೆ ಲಗ್ಗೆ

ಪರಾಜಿತ 9 ತಂಡಕ್ಕೆ ಟೈಸನ್ ಕೊಳಿ ಹಾಗೂ ಒಂದು ಕುಪ್ಪಿ ವಿಶೇಷ ಬಹುಮಾನ

ಚೆಯ್ಯಂಡಾಣೆ ನ 24. ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ಆಯೋಜಿಸಿರುವ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಬಾವಲಿ ಹಾಗೂ ಕೊಕೇರಿ ತಂಡ ಫೈನಲ್ ಹಂತಕ್ಕೆ ತಲುಪಿದೆ.

ಪಂದ್ಯಾಟ ವಿವರ
ಮೊದಲ ಪಂದ್ಯಾಟವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಹಾಗೂ ಚೆನೀಯಪಂಡ ಗಣಪತಿ ಎರಡನೇ ಪಂದ್ಯಾಟವನ್ನು ಕೋರ್ ಆಫ್ ಸಿಗ್ನೇಲ್ಸ್, ಆರ್ಮಿ ಸರ್ವಿಸೆಸ್ ತಂಡದಲ್ಲಿ ಹಾಗೂ ಭಾರತೀಯ ಹಾಕಿ ಶಿಬಿರದಲ್ಲಿ ಭಾಗವಹಿಸಿದ ಕರೀನೇರವಂಡ ದರ ತಮ್ಮಯ್ಯ ಉದ್ಘಾಟಿಸಿದರು.

ಮೊದಲ ಸೆಮಿಫೈನಲ್ ಪಂದ್ಯವನ್ನು ಕರಡ ಬ್ಯಾಂಕ್ ಆಪ್ ಬರೋಡ ವ್ಯವಸ್ಥಾಪಕರಾದ ಮನೋಹರ್ ಶರ್ಮ ಹಾಗೂ ಬೊಳ್ಳಚೆಟ್ಟಿರಾ ಪ್ರಕಾಶ್ ಉದ್ಘಾಟಿಸಿದರು.

2 ನೇ ಸೆಮಿಫೈನಲ್ ಪಂದ್ಯವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾ.ಪಂ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಬೊಳ್ಳಚೆಟ್ಟಿರಾ ಸುರೇಶ್,ಪಾಂಡಂಡ ಮೊಣ್ಣಪ್ಪ ಉದ್ಘಾಟಿಸಿದರು.

ಇದಕ್ಕೂ ಮೊದಲು ನಡೆದ ಪಂಧ್ಯದಲ್ಲಿ ಕೊಕೇರಿ ಬಿರುಸಿನ ಪ್ರದರ್ಶನ ನೀಡಿ ಕೈಕಾಡು ತಂಡವನ್ನು 6-1 ಗೋಲು ಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು. ಕೊಕೇರಿ ತಂಡದ ಫಹದ್ ವಯಕೋಲ್ ಮೊದಲ ಗೋಲ್ ಹೋಡೆದರೆ,ಯಶ್ವ0ತ್ 2, ಲೋಕೇಶ್ 1, ಪೂವಣ್ಣ1, ಚಂಗಪ್ಪ 1 ಗೋಲು ಹೊಡೆದರು.ಕೈಕಾಡು ತಂಡದ ಹರ್ಷ 1ಗೋಲು ಹೊಡೆದು ಗೋಲಿನ ಅಂತರ ತಗ್ಗಿಸಿದರು.

ಎರಡನೇ ಪಂದ್ಯದಲ್ಲಿ ಮಹಾದೇವ ಸ್ಪೋಟ್ಸ್ ಕ್ಲಬ್ ಬಲಂಬೇರಿ ತಂಡ ಪಾಲಂಗಾಲ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದು ಕೊಂಡರು. ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ ತಂಡದ ತರುಣ್, ಅಪ್ಪಚ್ಚು, ಬೆಳ್ಳಿಯಪ್ಪ ತಲಾ ಒಂದು ಗೋಲು ಹೊಡೆದರೆ ಪಾಲಂಗಾಲ ತಂಡದ ಕರೀನೇರವಂಡ ವಸಂತ್ ಒಂದು ಗೋಲು ಹೊಡೆದರು.

ಸೆಮಿಫೈನಲ್ ನಲ್ಲಿ ಬಾವಲಿ ತಂಡ ಕಿರು0ಡಾಡು ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಫೈನಲ್ ಗೆ ಅರ್ಹತೆ ಪಡೆಯಿತು.ಕುತೂಹಲ ಮೂಡಿದ ಪಂಧ್ಯದಲ್ಲಿ 2-2 ಗೋಲು ಗಳಿಂದ ಸಮಬಲದ ಹೋರಾಟ ಮಾಡಿ ಕಡೆಯ 3 ನಿಮಿಷದಲ್ಲಿ ಬಾವಲಿ ತಂಡ ಗೋಲು ಗಳಿಸಿದರ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತು. ಬಾವಲಿ ತಂಡದ ಸುಗನ್, ಕಾರ್ಯಪ್ಪ, ಪ್ರಜ್ವಲ್ ಹಾಗೂ ಕಿರು0ಡಾಡು ತಂಡದ ಕಾಳಪ್ಪ ಹಾಗೂ ಹೇಮಂತ್ ತಲಾ ಒಂದು ಗೋಲುಗಳಿಸಿದರು.

2 ನೇ ಸೆಮಿಫೈನಲ್ ಪಂದ್ಯದಲ್ಲಿ ಕೊಕೇರಿ ತಂಡ ಮಹಾದೇವಾ ಸ್ಪೋಟ್ಸ್ ಕ್ಲಬ್ ಬಲಂಬೇರಿ ತಂಡವನ್ನು 3-2 ಗೋಲಿನಿಂದ ಸೋಲಿಸಿ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡರು. ಪ್ರಥಮಾರ್ದದಲ್ಲಿ ಯಾವುದೇ ಗೋಲುಗಳಿಸಲಿಲ್ಲ ದ್ವಿತೀಯಾದದಲ್ಲಿ ಕೊಕೇರಿ ತಂಡದ ಅತಿಥಿ ಆಟಗಾರ ಯಶ್ವ0ತ್ ಅದ್ಬುತ 2 ಗೋಲು ಬಾರಿಸಿ ತಂಡಕ್ಕೆ ಜಯ ತಂದು ಕೊಟ್ಟರು.

ತೀರ್ಪುಗಾರರಾಗಿ ಚೆಯ್ಯ0ಡ ಲವ ಅಪ್ಪಚ್ಚು,ಚೋಯಮಾಡ0ಡ ಚಂಗಪ್ಪ,ಚಂದಪಂಡ ಆಕಾಶ್, ಅಂಜಪರವಂಡ ಕುಶಾಲಪ್ಪ, ನೆಲ್ಲಮಕ್ಕಡ ಪವನ್ ಕಾರ್ಯ ನಿರ್ವಹಿದರೆ ವೀಕ್ಷಕ ವಿವರಣೆಯನ್ನು ವಿಖ್ಯಾತ ವೀಕ್ಷಕ ವಿವರಣೆಗಾರ ಚೆಪ್ಪುಡೀರ ಕಾರ್ಯಪ್ಪ ಹಾಗೂ ನೆರಪಂಡ ಆರ್ಷ ಮಂದಣ್ಣ, ಚೇನಂಡ ಸಂಪತ್ ನಿರ್ವಹಿಸಿದರು.

ತಾ 25 ರ ಫೈನಲ್ ಪಂದ್ಯ:

ಬಾವಲಿ VS ಕೊಕೇರಿ

ಟೈಸನ್ ಕೋಳಿ ಹಾಗೂ ಕುಪ್ಪಿ:
ಒಟ್ಟು 9 ಪರಾಜಿತ ತಂಡಕ್ಕೆ ಐತಿಚಂಡ ಪ್ರಕಾಶ್ ಕಾರ್ಯಪ್ಪ ಟೈಸನ್ ಕೋಳಿ ಹಾಗೂ ಒಂದು ಕುಪ್ಪಿ ನೀಡಿದ್ದು ಇಲ್ಲಿ ವಿಶೇಷ ವಾಗಿತ್ತು ಇದು ಕೊಡಗಿನಲ್ಲಿ ಮೊದಲ ಬಾರಿ ನಡೆಯುತ್ತಿದ್ದು ಇದಕ್ಕೂ ಮೊದಲು ಬಿಹಾರದ ಒಂದು ಗ್ರಾಮದಲ್ಲಿ ಕುರಿಯನ್ನು ಗೆದ್ದ ತಂಡಕ್ಕೆ ಬಹುಮಾನವಾಗಿ ನೀಡಲಾಗುತಿತ್ತು ಎಂಬುದಾಗಿತ್ತು.

ಸಮಾರೋಪ ಸಮಾರಂಭ:
ಫೈನಲ್ ಪಂದ್ಯಾಟ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವು ಕೊಡವ ಕಲ್ಚರಲ್ ರಿಕ್ರಿಯೇಷನ್ ಕ್ಲಬ್ ನ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜೀಕುಟ್ಟಿರ ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಮೆದುರ ಗಣು ಕುಶಾಲಪ್ಪ, ಬ್ರಿಗೇಡಿಯರ್ ಪಟ್ರಪಂಡ ಮೊಣ್ಣಪ್ಪ ಕೊಟ್ಟೋಳಿ,ರೀನಾ ಸುವರ್ಣ ಎಸಿಪಿ ಬೆಂಗಳೂರು,ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಸುದು ಬೋಪ್ಪಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.

0 0 votes
Article Rating
Subscribe
Notify of
guest
0 Comments
Inline Feedbacks
View all comments