ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಕೆ. ಎಂ. ಎಫ್. ಫ್ರೆಂಡ್ಸ್ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ಡಿಸೆಂಬರ್ 9 ಹಾಗೂ 10 ರಂದು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆಯಲಿದೆ.
ಒಟ್ಟು ಎಂಟು ಮಾಲೀಕತ್ವದ ಎಂಟು ತಂಡಗಳು ಪಾಲ್ಗೊಳ್ಳಲಿದೆ. ಇಶಾನಿ. ಎಫ್. ಸಿ.,ಗೋಣಿಕೊಪ್ಪ. ಜನನಿ. ಎಫ್, ಸಿ, ಮಡಿಕೇರಿ. ಮಾನ್ವಿಕ್. ಎಫ್. ಸಿ.ಅಮ್ಮತಿ, ಟೀಮ್ ಹಂಟರ್ಸ್ ಮರಗೋಡು, ಮೊಗೇರ ಎಫ್. ಸಿ, ಪಾಲಿಬೆಟ್ಟ, ಫಿಯೋನೆಕ್ಸ್ ಎಫ್. ಸಿ. ಸೋಮವಾರಪೇಟೆ, ಎ.ಎಂ. ಎಫ್. ಸಿದ್ದಾಪುರ, ಹಾಗೂ ಭಗವತಿ, ಎಫ್. ಸಿ, ಹಾಲುಗುಂದ, ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.
ಪಂದ್ಯ ಕೂಟದ ವಿನ್ನರ್ಸ್ ತಂಡಕ್ಕೆ 25000 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 15000 ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ ,ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ.
ಕ್ರೀಡಾ ಕೂಟದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್ ಮರಗೋಡು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜದ ಮಾಜಿ ಅಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ರವಿ. ಪಿ. ಎಂ. ಹಾಗೂ ಪ್ರಥಮ ಮತ್ತು ದ್ವಿತೀಯ ಬಹುಮಾನದ ದಾನಿಗಳು ರವಿ, ಭದ್ರ ಕ್ಲಬ್ ಪಾಲಿಬೆಟ್ಟ, ಶಕ್ತಿ ದಿನ ಪತ್ರಿಕೆಯ ಹಿರಿಯ ಉಪ ಸಂಪಾದಕ ಕುಡೇಕಲ್ ಸಂತೋಷ್ ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕ್ರೀಡಾ ಕೂಟದ ಪ್ರಮುಖವಾಗಿ ಸಮಾಜದ ಹುಡುಗಿಯರ ಪ್ರದರ್ಶನ ಪಂದ್ಯ, ಹಾಗೂ ಆಯೋಜಕರು ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯವು ನಡೆಯಲಿದೆ ಎಂದು ಆಯೋಜಕರಾಗಿರುವ, ರಮೇಶ್ ಮಡಿಕೇರಿ, ದಿನೇಶ್ .ಟಿ , ದರ್ಶಿತ್ ಹೆಬ್ಬಟ್ಟಗೇರಿ, ವಿವೇಕ್ ಮೊಗೇರ ಕಡಗದಾಳು, ಹಾಗೂ ಗುರುಕುಲ ಕಲಾ ಮಂಡಳಿಯ ದಿನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.