ನಾಪೋಕ್ಲು: ಕೊಡಗು ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ನಾಪೋಕ್ಲು ಬಳಿಯ ಕೊಟ್ಟಮುಡಿಯಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ನ ನೂತನ ಕಾಲೇಜು ಕಟ್ಟಡ ಮತ್ತು ವಿದ್ಯಾರ್ಥಿನಿಯರ ವಸತಿಗೃಹ ಕಟ್ಟಡದ ಉದ್ಘಾಟನಾ ಸಮಾರಂಭ 2024 ಜ.3 ರಂದು ನಡೆಸುವುದಾಗಿ ಕೊಡಗು ಜಿಲ್ಲಾ ಖಾಝಿಗಳಾದ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರು ದುಬೈನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.
ಮರ್ಕಝಲ್ ಹಿದಾಯ ಕೊಟ್ಟಮುಡಿ ಯುಎಇ ಸಮಿತಿ ವತಿಯಿಂದ ಯುಎಇ ಯೂನಿಯನ್ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗ್ರಾಂಡ್ ಮುಫ್ತಿ ಅಬೂಬಕ್ಕರ್ ಮುಸ್ಲಿಯಾರ್ ಮರ್ಕಝ್ ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ದಿನಾಂಕವನ್ನು ಘೋಷಣೆಮಾಡಿದರು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಡಾ.ಅಬ್ದುಲ್ ಹಕೀಮ್ ಅಝ್ಹರಿ, ಜಲೀಲ್ ನಿಜಾಮಿ,ಮರ್ಕಝ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೊಡಗು ಸುನ್ನೀ ವೆಲ್ಫೇರ್ ಅಧ್ಯಕ್ಷ ಕೆ.ಕೆ.ಉಸ್ಮಾನ್ ಹಾಜಿ ನಾಪೋಕ್ಲು,ದುಬೈ ಝೋನಲ್ ಅಧ್ಯಕ್ಷ ಶಾಫಿ ಸಖಾಫಿ, ಅಹಮದ್ ಚಾಮಿಯಾಲ್ ಸೇರಿದಂತೆ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.