ಚೆಯ್ಯಂಡಾಣೆ, ಡಿ 4. ನರಿಯಂದಡ ಗ್ರಾಮ ಪಂಚಾಯಿತಿಯ 2023-24 ನೇ ಸಾಲಿನ ಮೊದಲ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿಯಾಗಿ ಆಗಮಿಸಿದ ಮಡಿಕೇರಿ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ ವಹಿಸಿ ಮಾತನಾಡಿದರು. ಹಣಕಾಸು ಯೋಜನೆಯ ವರದಿಯನ್ನು ಹಾಗೂ ಕಾಮಗಾರಿಯ ಲೆಕ್ಕ ಪತ್ರದ ಮಾಹಿತಿಯನ್ನು ಸಾಮಾಜಿಕ ಲೆಕ್ಕ ಪರಿಶೋಧಕಿ ನುಸೈಬ ಮಂಡಿಸಿದರು.
ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕ ಸುಂದರೇಶ್ ಮಾತನಾಡಿ ಲೆಕ್ಕ ಪರಿಶೋದನಾ ವರದಿಯಲ್ಲಿ ಎರಡು ಮೂರು ಸಣ್ಣ ಕಾಮಗಾರಿಗಳ ತಕರಾರುಗಳನ್ನು ಹೊರತು ಪಡಿಸಿ ಉಳಿದ ಲೆಕ್ಕದ ಮಾಹಿತಿ ಪರಿಪೂರ್ಣವಾಗಿರುದರಿಂದ ಲೆಕ್ಕ ಪತ್ರದ ನಡವಳಿಕೆ ಅನುಮೋದನೆ ನಿಡಲಾಯಿತು.
ರಸ್ತೆಯ ಕಾಂಗ್ರೆಟ್ ಕಾಮಗಾರಿ ಕಳಪೆಯಿಂದ ಕೂಡಿದ ಬಗ್ಗೆ ಸಭೆಯಲ್ಲೆ ಯೋಜನಾಧಿಕಾರಿಗಳು ಮಾಹಿತಿ ನೀಡಿದಾಗ ಪಂಚಾಯತ್ ರಾಜ್ ಇಲಾಖೆಯ ಅಭಿಯಂತರ ಅಶೋಕ್ ಕೂಡಲೇ ಕಳಪೆ ಕಾಮಗಾರಿಯನ್ನು ಸರಿಪಡಿಸಲಾಗಿದು ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.