ಚೆಯ್ಯಂಡಾಣೆ ಡಿ 6: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದ ಕಂದಾಯ ಇಲಾಖೆಗೆ ಸೇರಿದ ಸರ್ವೆ ನಂ 154/9ರಲ್ಲಿ ಅರಣ್ಯ ಇಲಾಖೆಯವರು ಅನಧಿಕೃತವಾಗಿ ನಿರ್ಮಿಸಿದ್ದ ವಸತಿಗೃಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದರಿ ಜಾಗವು ಕಂದಾಯ ಇಲಾಖೆಗೆ ಸೇರಿದ್ದು, ಇಲ್ಲಿರುವ ಕಟ್ಟಡವನ್ನು ತೆರವುಗೊಳಿಸುವಂತೆ ತಹಶೀಲ್ದಾರರು 11.10.2023 ರಂದು ಆದೇಶ ನೀಡಲಾಗಿತ್ತು.
ಅದರಂತೆ 05.12.2023 ರಂದು ಅರಣ್ಯ ಇಲಾಖೆ ನಿರ್ಮಿಸಿದ ವಸತಿ ಗೃಹದ ಕಟ್ಟಡವನ್ನು ಚೇಲಾವರ ಗ್ರಾಮದ ಗ್ರಾಮಸ್ಥರು ಹಾಗೂ ನರಿಯಂದಡ ಗ್ರಾಮದ ಅಭಿವೃದ್ಧಿ ಅಧಿಕಾರಿಯವರ ಸಮ್ಮುಖದಲ್ಲಿ ಕಂದಾಯ ಇಲಾಖೆಯ ಸ್ವಾದೀನಕ್ಕೆ ಪಡೆಯಲಾಗಿರುತ್ತದೆ.
ಈ ಸಂದರ್ಭ ಕಂದಾಯ ಪರಿವಿಕ್ಷಕ ರವಿಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಲೆಕ್ಕಿಗರಾದ ಸ್ವಾತಿ, ಜನಾರ್ದನ, ದ್ವಿತೀಯ ದರ್ಜೆ ಲೆಕ್ಕಸಹಾಯಕ ಬಿದ್ದಪ್ಪ,, ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ, ಗ್ರಾಮಸ್ಥರು ಇದ್ದರು.