Reading Time: < 1 minute
ಕರಡ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾಲು ಚೆಂಡು ಪಂದ್ಯವಳಿ: ಕಡಂಗ ಫ್ರೆಂಡ್ಸ್ ಚಾಂಪಿಯನ್
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಕಡಂಗ: ಕರಡ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾಲು ಚೆಂಡು ಪಂದ್ಯವಳಿಯನ್ನು ಕರಡ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ಪಂದ್ಯಾವಳಿಯನ್ನು ಕರಡ ಪ್ರಾಥಮಿಕ ಶಾಲಾ ಶಿಕ್ಷಕಿ ದಮಯಂತಿ ಮತ್ತು ಐತಿಚಂಡ ಪ್ರಕಾಶ್ ಕಾರ್ಯಪ್ಪನವರು ದೀಪ ಬೆಳಗಿಸುವುದರ ಮೂಲಕ ಪಂದ್ಯವಳಿಗೆ ಚಾಲನೆ ನೀಡಿದರು.
ಫೈನಲ್ ಪಂದ್ಯದಲ್ಲಿ ಕಡಂಗ ಫ್ರೆಂಡ್ಸ್ ತಂಡ ಕುಂಜಿಲ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಸಭಾಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಂಡ0ಡ ರಘು ಪತಿ, ದರ್ಶನ್, ಅರ್ಜುನ್, ಸುಬ್ರಮಣಿ, ಮುಂತಾದ ಗಣ್ಯರು ಉಪಸ್ಥಿತರಿದ್ದರು
ವರದಿ: ನೌಫಲ್ ಕಡಂಗ