ಚೆಯ್ಯ0ಡಾಣೆ,ಡಿ 8. ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳ ಹಾಗೂ ನರಿಯಂದಡ ಗ್ರಾ.ಪಂ.ವ್ಯಾಪ್ತಿಯ ಚೆಯ್ಯ0ಡಾಣೆ,ಕರಡ,ಕಡಂಗ ಪ್ರಾಥಮಿಕ ಶಾಲೆಯ ಹಾಗೂ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಮಕ್ಕಳ ಗ್ರಾಮ ಸಭೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಮಹಿಳಾ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ ವಹಿಸಿದರೆ, ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷಯನ್ನು ನರಿಯಂದಡ ಪ್ರೌಢ ಶಾಲೆಯ ಶಾಲಾ ನಾಯಕಿ ದೇಚಮ್ಮ ವಹಿಸಿದರು.
ಸಾಮಾಜಿಕ ಕಾರ್ಯಕರ್ತೆ ಸ್ವಾತಿ ಮಕ್ಕಳ ಹಕ್ಕು,ಬಾಲ್ಯ ವಿವಾಹ, ಬಾಲ ಕಾರ್ಮಿಕ ವ್ಯವಸ್ಥೆ, ಲೈಂಗಿಕ ದೌರ್ಜನ್ಯ, ಶಿಕ್ಷಣದ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಆಪ್ತ ಸಮಾಲೋಚಕರಾದ ನಿರ್ಮಲಾ ಮಾತನಾಡಿ ವಿದ್ಯಾರ್ಥಿಗಳ ವ್ಯಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ವಿವರಿಸಿದರು, ದೈಹಿಕವಾಗಿ,ಮಾನಸಿಕವಾಗಿ, ಸದೃಢವಾಗುವ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಯೋಜನಾಧಿಕಾರಿ ಶೀಲಾ ರವರು ಮಾತನಾಡಿ ಮಕ್ಕಳ ದೈಹಿಕ ಆರೋಗ್ಯ ಬೆಳವಣಿಗೆಗೆ ಬೇಕಾದ ಆಹಾರ ಪದಾರ್ಥಗಳ ಬಗ್ಗೆ, ಶಾಲೆಯಲ್ಲಿ ಪೌಷ್ಟಿಕತೆಗೆ ನೀಡುವ ಆಹಾರ ಪದಾರ್ಥಗಳ ಬಗ್ಗೆ, ಸರಕಾರಿ ಶಾಲೆಗಳಿಗೆ ಪೋಷಕರು ಆದ್ಯತೆ ನೀಡಬೇಕೆಂಬ ವಿಚಾರಗಳನ್ನು ಸಭೆಯಲ್ಲಿ ತಿಳಿಸಿಕೊಟ್ಟರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ,ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ,ಗ್ರಾ.ಪಂ. ಸದಸ್ಯರು, ಪ್ರಾಥಮಿಕ ಅರೋಗ್ಯ ಕೇಂದ್ರದ ಕನಕಾವತಿ, ಚೆಯ್ಯ0ಡಾಣೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ, ನರಿಯಂದಡ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಹೇಮಮಾಲಿನಿ,ಗ್ರಂಥಪಾಲಕಿ ರೆನಿ ಬಿಬೋ,ಶಿಕ್ಷಕ ವೃಂದದವರು,ಗ್ರಾ.ಪಂ. ಸಿಬ್ಬಂದಿಗಳು ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.