Reading Time: 2 minutes
ನಾಪೋಕ್ಲು : ನಾಪೋಕ್ಲುವಿನ ಮೊಹಿಯದ್ದೀನ್ ಜುಮಾ ಮಸೀದಿಯ ಆದಿನದಲ್ಲಿ ಕಾರ್ಯಾಚರಿಸುವ ಓಎಸ್ಎಫ್ ( ಹಳೇ ವಿದ್ಯಾರ್ಥಿಗಳ ಸಂಘ ) ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಪೋಕ್ಲುವಿನ ತಶ್ರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ನಾಪೋಕ್ಲು ಪಟ್ಟಣದಲ್ಲಿರುವ ಮೊಹಿಯದ್ದೀನ್ ಜುಮಾ ಮಸೀದಿಯ ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶುಹೈಬ್ ಅವರ ಅದ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಪಿ.ಐ, ಉಪಾಧ್ಯಕ್ಷರಾಗಿ ಕೆ.ಎ. ಝಕರಿಯ, ಸಹಕಾರಿದರ್ಶಿಯಾಗಿ ಯೂನಸ್, ಖಜಾಂಚಿಯಾಗಿ ಟಿ.ಎಂ.ಹಾರಿಸ್, ಸಮಿತಿ ಸದಸ್ಯರಾಗಿ ಆಸ್ಕರ್ ಸೈಟ್, ನೌಶಾದ್, ಪೈಸಲ್ ಪಿ.ಎಂ, ಶುಹೈಬ್ ಪಿ.ಎಂ, ನೌಫಲ್, ರಶೀದ್, ಅಬ್ದುಲ್ ಖಾದರ್, ಅಬ್ದುಲ್ ಜಬ್ಬಾರ್, ಅಬ್ದುಲ್ ರಹ್ಮಾನ್, ಝುಬೈರ್, ಶಾಹಿದ್ ಹಿಮಮಿ, ಸೌಕತ್ ಅಲಿ, ಸಾದಿಕ್ ನಿಝಾಮಿ ನೂತನ ಸಮಿತಿಗೆ ಆಯ್ಕೆಯಾದರು.