ಸಾಹಿತ್ಯೋತ್ಸವ ಯುವ ಪ್ರತಿಭೆಗಳನ್ನು ಹೊರ ತರುವ ವೇದಿಕೆ : ಅಬ್ದುಲ್ ಸಲಾಂ ಶಾಮಿಲಿ ಇರ್ಫಾನಿ
ಚೆಯ್ಯ0ಡಾಣೆ, ಡಿ 11. ಯುವ ಪ್ರತಿಭೆಗಳನ್ನು ಹೊರ ತರಲು ಎಸ್ ಎಸ್ ಎಫ್ ಹಮ್ಮಿಕೊಳ್ಳುತ್ತಿರುವ ಸಾಹಿತ್ಯೋತ್ಸವ ಕಾರ್ಯಕ್ರಮ ವೇದಿಕೆ ಶ್ಲಾಘನೀಯವಾದದ್ದು ಎಂದು ಅಬ್ದುಲ್ ಸಲಾಂ ಶಾಮಿಲಿ ಇರ್ಫಾನಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಇವರು ಸುನ್ನಿ ಸ್ಟೂಡೆಂಟ್ ಫೆಡರೇಷನ್ ಅಸೋಸಿಯೇಷನ್ (ಎಸ್ ಎಸ್ ಎಫ್) ಕಡಂಗ ಸೆಕ್ಟರ್ ವತಿಯಿಂದ ಕಿಕ್ಕರೆ ಇರ್ಷಾದುಲ್ ಇಸ್ಲಾಂ ಮದರಸ ಸಭಾಂಗಣ ಸೆಕ್ಟರ್ ಸಾಹಿತ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು.
ಮರ್ಕಜ್ ಮುದರಿಸ್ ಹುಸೈನ್ ನೂರಾನಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕಡಂಗ, ಎಡಪಾಲ, ಕಿಕ್ಕರೆ, ಚಾಮಿಯಾಲ, ದೇವಣಗೇರೆ ಯೂನಿಟ್ ನ ವ್ಯಾಪ್ತಿಯ ಒಟ್ಟು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು 120 ಸ್ವರ್ದೆಯಲ್ಲಿ ಭಾಗವಹಿಸಿದರು.
ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳು ಡಿವಿಷನ್ ಹಂತಕ್ಕೆ ಪ್ರವೇಶ ಪಡೆದರು.
ಸೆಕ್ಟರ್ ಮಟ್ಟದಲ್ಲಿ ಕಡಂಗ ಯೂನಿಟ್ ವಿದ್ಯಾರ್ಥಿಗಳು 666 ಅಂಕ ಪಡೆದು ಚಾಂಪಿಯನ್ ಆಗಿ ಹೊರಹೋಮ್ಮಿದರೆ, ಕಿಕ್ಕರೆ ಯೂನಿಟ್ ವಿದ್ಯಾರ್ಥಿಗಳು 481 ಅಂಕ ಪಡೆದು ರನ್ನರ್ಸ್ ಗೆ ತೃಪ್ತಿ ಪಟ್ಟು ಕೊಂಡರು.
ರಾಜ್ಯ ಮಟ್ಟದಲ್ಲಿ ಮಿಂಚಿದ ಬಾಲಕನಿಗೆ ಸನ್ಮಾನ:
ಇದೆ ಸಂದರ್ಭ ಪ್ರತಿಬಾರಿ ಸಾಹಿತ್ಯೋತ್ಸವದಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ನೌಫಲ್ ಕೆ.ಬಿ. ಕಿಕ್ಕರೆ ಯವರನ್ನು ಕಿಕ್ಕರೆ ಸಂಘ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ ಎಸ್ ಎಫ್ ಕಡಂಗ ಸೆಕ್ಟರ್ ಅಧ್ಯಕ್ಷ ಶಮೀರ್ ಸಖಾಫಿ ಕಿಕ್ಕರೆ ವಹಿಸಿದರು.
ಈ ಸಂದರ್ಭ ಕಿಕ್ಕರೆ ಜುಮಾ ಮಸೀದಿಯ ಅಧ್ಯಕ್ಷರಾದ ಉಸ್ಮಾನ್ ಕೆ.ಯು,ಕಡಂಗ ಬದ್ರಿಯಾ ಮಸೀದಿ ಕಾರ್ಯದರ್ಶಿ ರಾಶೀದ್,ಅಬ್ದುಲ್ ಮಜೀದ್ ಮುಸ್ಲಿಯಾರ್,ಸ್ವಾಗತ ಸಮಿತಿಯ ಬಷೀರ್,ಎಸ್ ವೈ ಎಸ್ ಕಿಕ್ಕರೆ ಅಧ್ಯಕ್ಷ ಸೂಫಿ,ಸಮೀರ್ ಸಿ.ಎ.ಕಡಂಗ,ಸತ್ತಾರ್,ರಫೀಕ್ ಅರಫಾ, ನೌಶಾದ್ ಸಿ.ಎಂ, ಶಮೀರ್ ಪಿ.ಎಂ.,ಮತಿತ್ತರರು ಉಪಸ್ಥಿತರಿದ್ದರು.