ಕ್ರೀಡಾ ತರಬೇತುದಾರ ಅಬ್ದುಲ್ಲ ಪೊಯಕೆರೆ ರವರಿಗೆ ಸನ್ಮಾನ
ಕಡಂಗ: ಫೋರ್ ಸ್ಟಾರ್ ಕ್ರೀಡಾ ಸಂಘ ಎಡಪಾಲ ವತಿಯಿಂದ ತಂಡದ ತರಬೇತುದಾರಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಬ್ದುಲ್ಲ ಪೊಯಕೆರೆ ರವರಿಗೆ ಸಂಘದ ಕಚೇರಿಯಲ್ಲಿ ಊರಿನ ಪ್ರಮುಖರ ಸಮ್ಮುಖದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವಾಗಿದೆ ಎಡಪಾಲ ಫೋರ್ ಸ್ಟಾರ್ ತಂಡ.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಫೋರ್ ಸ್ಟಾರ್ ಅಧ್ಯಕ್ಷ ಹನೀಫ ಎರಟೆಂಡ ನೆರವೇರಿಸಿದರು. ಸ್ವಾಗತವನ್ನು ರಶೀದ್ ಕುಪ್ಪೋಡ0ಡ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರದಾಂತಹ ಶಂಷುದೀನ್, ಶಿಯಾಬ್, ಶಂಸೀರ್, ಉಸ್ಮಾನ್, ಸಾಬಿತ್, ಸಫ್ವಾನ್, ಮುಹಸಿನ್, ಇಲ್ಯಾಜ್,
ಊರಿನ ಹಿರಿಯರದಂತಹ ಅಬ್ಬಾಸ್, ಬಷೀರ್, ಕುಪ್ಪೋದಂಡ ಹಮೀದ್, ಜುನೈದ್, ರಾಜಾಕ್, ಲತೀಫ್, ರಿಯಾಜ್, ನಾಸರ್, ಶುಕೂರ್, ಝುಬೈರ್, ನಂದಕುಮಾರ್ ಮತ್ತು ಹಲವು ಯುವಕರು ಉಪಸ್ಥಿತರಿದ್ದರು.
ವರದಿ: ನೌಫಲ್ ಕಡಂಗ