ಪೆರಾಜೆ: ಯು ಪಿ. ಪೆರಾಜೆ ಗ್ರಾಮದ ಕುಂಡಾಡು ಹುಕ್ರಪ್ಪ ನಾಯ್ಕರವರ ಮನೆ ವಠಾರದಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷ ತೆಯನ್ನು ಬೂತ್ ಅಧ್ಯಕ್ಷ ರಾದ ಪಾರ್ಶ್ವನಾಥ ಪೆರುಮುಂಡ ರವರು ನೆರವೆರಿಸಿದರು. ಕಾರ್ಯಕ್ರಮದ ಸ್ವಾಗತ ವನ್ನು ವಕೀಲೆ ಕು: ಚಂದನಾ ಕುಂದಾಡು ನಿರ್ವಹಿಸಿದರು.
ಪೆರಾಜೆ ವಲಯ ಅಧ್ಯಕ್ಷರಾದ ಜಯರಾಂ ಪೆರುಮುಂಡ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಂದೆ ಕಾರ್ಯಕರ್ತರ ಸ್ಥಳೀಯ ಅಹವಾಲು ಆಲಿಸಿದರು. ಸ್ಥಳೀಯರು ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ಬಗ್ಗೆ,94C, ಸೋಲಾರ್ ದೀಪ ಅಳವಡಿಕೆ ಬಗ್ಗೆ, ಪಡಿತರ ಚೀಟಿ ಬಗ್ಗೆ ಮುಂತಾದ ಕಾರ್ಯಕ್ರಮ ದ ಬಗ್ಗೆ ಚರ್ಚಿಸಲಾಯಿತು.
ಕೆ.ಪಿ.ಸಿ.ಸಿ. ಸದಸ್ಯರಾದ ರಮಾನಾಥ ಬೇಕಲ್ ಮಾತನಾಡಿ ಸ್ಥಳೀಯ ಸಮಸ್ಯೆ ಗಳ ಬಗ್ಗೆ ಈಗಾಗಲೇ ಸರಕಾರ ಮುಂದೆ ಬಂದು ಪೋಡಿ ಸರ್ವೇ ನಡೆಸುತ್ತಿದ್ದು ಎಲ್ಲ ಸಮಸ್ಯೆ ಬಗೆಹರಿಸುವ ರೀತಿಯಲ್ಲಿ ನಮ್ಮ ಶಾಸಕರು ಸಹಕರಿಸಲಿದೆ ಎಂದು ಭರವಸೆ ನೀಡಿದರು. ಟಿ.ಪಿ. ರಮೇಶ್ ಮಾತನಾಡಿ ಜನರ ಸಮಸ್ಯೆ ಗಳಿಗೆ ITDP, ಶಿಕ್ಷಣ, PWD, ಪಂಚಾಯತ್ ರಾಜ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಕೂಡಲೇ ಸೂಕ್ತ ಪರಿಹಾರ ನೀಡುವಂತ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇನೆ0ದು ಹೇಳಿದರು. ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್ ನಾಪೋಕ್ಲು ಮಾತನಾಡಿ ಪಣೆಲ ಚಾಮಕಜೆ ರಸ್ತೆಯನ್ನು ಕೂಡಲೇ ಸರಿಪಡಿಸಲು ಕಾಮಾಗರಿಯನ್ನು ಆದಷ್ಟು ಬೇಗನೆ ಶಾಸಕರ ಅದೇಶನುಸಾರ ಆರಂಭಿಸಲಾಗುವುದು ಎಂದು ನುಡಿದರು .
ಸಭೆಯಲ್ಲಿ ಅತಿಥಿಗಳಾಗಿ ವಲಯ ಅಧ್ಯಕ್ಷ ರಾದ ವಲಯ ಆಧ್ಯಕ್ಷರಾಗಿ ಜಯರಾಮ್ ಪೇರುಮುಂಡ ,ಕೆ.ಪಿ.ಸಿ.ಸಿ. ಸದಸ್ಯರಾದ ಟಿ ಪಿ ರಮೇಶ್ , ರಮಾನಾಥ್ ಬೇಕಲ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ , ಶೌಕತ್ ಅಲಿ, ಬಶೀರ್ ಚೆರಂಬಾಣೆ, ರಾಜೇಶ್ವರಿ, ಸುರೇಶ್, ಹರಿಪ್ರಸಾದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ತುಳಸಿ ಗಾಂಧಿ ಪ್ರಸಾದ್, ಚಿದಾನಂದ, ಮನು ಮೇರುಮುಂಡ, ಸುರೇಶ್ ಎ ಪಿ ಮತ್ತು ಸ್ಥಳೀಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು ಕಾರ್ಯಕ್ರಮದ ವಂದನಾರ್ಪಣೆ ಯನ್ನು ಜಯರಾಂ ಪೆರುಮುಂಡ ನಿರ್ವಹಿಸಿದರು.
ವರದಿ: ನೌಫಲ್ ಕಡಂಗ