ಕುಂಜಲಗೇರಿಯಲ್ಲಿ ಬೆಟ್ಲಪ್ಪ ಈಶ್ವರ ದೇವರ ವಾರ್ಷಿಕ ಮಹಾಪೂಜೆ
ವಿರಾಜಪೇಟೆ ತಾಲ್ಲೂಕಿನ ಕುಂಜಲಗೇರಿ ಗ್ರಾಮದ ಬೆಟ್ಟದ ಮೇಲೆ ನೆಲೆ ನಿಂತಿರುವ ಬೆಟ್ಲಪ್ಪ ಈಶ್ವರ ದೇವರ ವಿಶೇಷ ಪೂಜೆ ದಿನಾಂಕ 15.11.2023 ರಿಂದ ಒಂದು ತಿಂಗಳು ಅಂದರೆ 14.12.2023 ರ ವರೆಗೆ ನೆಡೆಸಲಾಯಿತು.
ಈ ದೇವಾಲಯವು ವಿಶೇಷ ಇತಿಹಾಸ ಹೊಂದಿದ್ದು ಬೆಟ್ಟದ ಮೇಲೆ ನೆಲೆ ನಿಂತಿರುವ ಈಶ್ವರನಿಗೆ ಪ್ರತಿ ವರ್ಷ ಇದೇ ಸಮಯದಲ್ಲಿ 30 ದಿನಗಳು ಪೂಜೆ ನೆಡೆಸುವುದು ವಿಶೇಷ ವಾಗಿದೆ.
ದಿನಾಂಕ* 14.12.2023 ಮಹಾದೇವನಿಗೆ ವಾರ್ಷಿಕ ಮಹಾಪೂಜೆಯು ನಡೆಯಿತು. ಪೂಜೆಯ ಸಮಯದಲ್ಲಿ ಕೆರಳದ ಚೆಂಡೆ ವಾದ್ಯ ಹಾಗೂ ಮಹಾಪೂಜೆಯ ನಂತರ ಬೆಟ್ಟದ ಕೆಳಗೆ ಇರುವ ಅರಳಿ ಮರದ ಸುತ್ತ ದೇವರ ಬಲಿ ನಡೆಯಿತು. ನಂತರ ಬೆಟ್ಟದ ತಪ್ಪಲಿನಲ್ಲಿ ಇರುವ ಈಶ್ವರನ ದೇವಸ್ಥಾನದಲ್ಲಿ ನೈವೇದ್ಯವೂ ಈಶ್ವರನಿಗೆ ಸಮರ್ಪಿತವಾಯಿತು. ದಿವ್ಯ ಶಕ್ತಿ ಹೊಂದಿರುವ ಈ ಈಶ್ವರನ ನೆಲೆಗೆ ಸಾವಿರಾರು ಭಕ್ತರು ಆಗಮಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಿ ದೇವರ ಕೃಪಾಶ್ರಿವಾದಕ್ಕೆ ಪಾತ್ರರಾದರು ಈ ಸಂದರ್ಭದಲ್ಲಿ ದೇವಸ್ಥಾನ ಸಂಘದ ಪದಾಡಿಕಾರಿಗಳು, ಕುಂಜಲಗೇರಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ವರದಿ: ನೌಫಲ್ ಕಡಂಗ