ಕಡಂಗದಲ್ಲಿ ಎಸ್.ಎಸ್.ಎಫ್. ವಿರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ

ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸಬೇಕು : ಕೋಡಿರ ವಿನೋದ್ ನಾಣಯ್ಯ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಚಾಂಪಿಯನ್ ಆಗಿ ಪಾಲಿಬೆಟ್ಟ ಸೆಕ್ಟರ್ /ರನ್ನರ್ಸ್ ಆಗಿ ಕಡಂಗ ಸೆಕ್ಟರ್

ಕಡಂಗ: ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸಬೇಕು, ನಾವು ಹುಟ್ಟುವಾಗ ಯಾವ ಧರ್ಮದಲ್ಲಿ ಹುಟ್ಟುತ್ತೆವೆ ಎಂದು ನಮಗೆ ಗೊತ್ತಿರುವುದಿಲ್ಲ ಆದರೆ ಹುಟ್ಟಿದ ನಂತರ ಒಂದು ಧರ್ಮಕ್ಕೆ ಸೀಮಿತವಾಗುತ್ತೇವೆ, ಅದರೊಂದಿಗೆ ಭವ್ಯ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದೇವೆ ಎಂದು ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಹೇಳಿದರು. ಇವರು ಕಡಂಗದಲ್ಲಿ ನಡೆದ ಸುನ್ನಿ ಸ್ಟೂಡೆಂಟ್ ಫೇಡರೇಷನ್ (ಎಸ್.ಎಸ್.ಎಫ್) ವಿರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮತ್ತೊರ್ವ ಮುಖ್ಯ ಅತಿಥಿ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಸಾಹಿತ್ಯೋತ್ಸವದ ಮುಖ್ಯ ದ್ವಾರವಾದ ಮಹೂಂ ಎಂ.ಎ. ಅಬೂಬಕ್ಕರ್ ಸ್ಮಾರಕ ದ್ವಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಎಲ್ಲಾ ವರ್ಗದ ಜನರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳಲು ಉತ್ತಮ ಯುವ ಪೀಳಿಗೆಯನ್ನು ಸಮಾಜಕ್ಕೆ ತರಲು ಇಂತಹ ಕಾರ್ಯಕ್ರಮದಿಂದ ಸಾಧ್ಯ, ಎಸ್.ಎಸ್.ಎಫ್. ಆಯೋಜಿಸಿದ ಸಾಹಿತ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ನುಡಿದರು.

ನಿವೃತ ಸೈನಿಕ ಹಾಗೂ ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮ್ಮರ್ ಸಿ.ಆರ್.ಪಿ.ಎಫ್, ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಸಿ.ಇ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಸಾಹಿತ್ಯೋತ್ಸವಕ್ಕೆ ಸ್ಥಾಪಿಸಿದ ಎಸ್.ಎಸ್.ಎಫ್. ದ್ವಜಾರೋಹಣವನ್ನು ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್ ಕೆ.ಇ. ನೆರವೇರಿಸಿದರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ರಾಫಿ ಹಿಮಾಮಿ ಅಲ್ ಹಾದಿ ಮಾತನಾಡಿ ದೇಶದಲ್ಲಿ ಎಸ್.ಎಸ್.ಎಫ್. ಎಂಬ ವಿದ್ಯಾರ್ಥಿ ಸಂಘಟನೆಯಿಂದ ಹಲವಾರು ಕಾರ್ಯಕ್ರಮಗಳು ಜಾರಿಗೊಂಡಿದ್ದು ವಿದ್ಯಾರ್ಥಿ ಒಕ್ಕೂಟದಿಂದ ರಾಷ್ಟ್ರದ ಒಳಿತಿಗೆ ಸಹಾಯಕಾರಿಯಾಗುತ್ತದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎಸ್.ಎಫ್. ವಿರಾಜಪೇಟೆ ಡಿವಿಷನ್ ಅಧ್ಯಕ್ಷ ಖಮರುದ್ದಿನ್ ಅನ್ವಾರಿ ವಹಿಸಿದರು. ಮುಖ್ಯ ಭಾಷಣಗಾರರಾಗಿ ಆಗಮಿಸಿದ ಎಸ್.ಎಸ್.ಎಫ್. ಕೇರಳ ರಾಜ್ಯಾಧ್ಯಕ್ಷರಾದ ಫಿರ್ದೌಸ್ ಸಖಾಫಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾಲದಿಂದಲೇ ವಿವಿಧ ಸ್ವರ್ಧೆಗಳಾದ ಭಾಷಣ, ಹಾಡು, ಸಾಂಸ್ಕೃತಿಕ ಕಲಾ ಸ್ವರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಬೇಕು, ರಾಜ್ಯ ರಾಷ್ಟ್ರಮಟ್ಟದಲ್ಲಿ ನಡೆಯುವಂತಹ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸದಾ ಸಿದ್ದರಾಗಿರಬೇಕು, ವಿದ್ಯಾರ್ಥಿ ಸಂಘಟನೆಗಳಿಂದ ಯುವ ಸಮೂಹ ತಪ್ಪುದಾರಿಗಳಿಂದ ಮುಕ್ತರಾಗಿ ಒಳ್ಳೆಯ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

2 ದಿನಗಳ ಕಾಲ ನಡೆದ ಸ್ವರ್ಧೆಯಲ್ಲಿ ವಿರಾಜಪೇಟೆ ಡಿವಿಷನ್ ಗೆ ಒಳಪಟ್ಟ ಐದು ಸೆಕ್ಟರ್ ಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣ ಗೊಳಿಸಿದರು. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾದರು . ಚಾಂಪಿಯನ್ ಆಗಿ ಪಾಲಿಬೆಟ್ಟ ಸೆಕ್ಟರ್ 752 ಅಂಕ ಪಡೆದು ಹೊರ ಹೊಮ್ಮಿದರೆ, 624 ಅಂಕ ಪಡೆದು ಕಡಂಗ ಸೆಕ್ಟರ್ ರನ್ನರ್ಸ್ ಗೆ ತೃಪ್ತಿ ಪಟ್ಟರು.

ಈ ಸಂದರ್ಭ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಪತ್ರಕರ್ತ ಅಶ್ರಫ್, ಮೊಯ್ದು ಮುಸ್ಲಿಯಾರ್, ಸಾಬಿತ್ ಮಾಸ್ಟರ್, ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಜೆಡಿಎಸ್ ವಿರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷ ಸೈಫುದ್ದಿನ್ ಚಾಮಿಯಾಲ್ ಬದ್ರಿಯಾ ಮಸೀದಿ ಕಾರ್ಯದರ್ಶಿ ರಾಶೀದ್, ಕೋಶಾಧಿಕಾರಿ ರಜಾಕ್, ಶಿಯಾಬುದ್ದಿನ್ ಚೌಹರಿ, ಎಸ್.ಎಸ್.ಎಫ್. ವಿರಾಜಪೇಟೆ ಡಿವಿಷನ್ ಕಾರ್ಯದರ್ಶಿ ರಶಾದ್ ಹೊಳಮಾಳ, ಗ್ರಾಮ ಪಂಚಾಯಿತಿ ಸದಸ್ಯ ಮಮ್ಮದ್, ಇಸ್ಮಾಯಿಲ್ ಅನ್ವಾರಿ ಅಹ್ಸನಿ, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಎಸ್ ವೈ ಎಸ್, ಎಸ್ ಎಸ್ ಎಫ್ ನಾ, ಹಾಗೂ ಸಂಘ ಕುಟುಂಬದ ಕಾರ್ಯಕರ್ತರು ಉಪಸ್ಥಿತರಿದ್ದರು.

0 0 votes
Article Rating
Subscribe
Notify of
guest
0 Comments
Inline Feedbacks
View all comments