Reading Time: < 1 minute
ಚೆಯ್ಯ0ಡಾಣೆ, ಡಿ 19: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಕ್ಕಬೆ ಡಾ- ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸುದೀರ್ಘ 15 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಿರಾಜಪೇಟೆ ತಾಲೂಕಿಗೆ ವಾರ್ಡನ್ ಆಗಿ ಮುಂಬಡ್ತಿ ಹೊಂದಿದ ಸುಮಯ್ಯ ಕೆ.ಎಂ.ರವರಿಗೆ ಇತ್ತೀಚೆಗೆ ಮಡಿಕೇರಿ ತಾಲೂಕು ವತಿಯಿಂದ ಮೆ.ಪೂ.ಬಾಲಕಿಯರ ನಿಲಯ ಮಡಿಕೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶರಾದ ಶೇಖರ್,ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಆಶಾ,ಮಡಿಕೇರಿ ತಾಲೂಕು ಸಹಾಯಕ ನಿರ್ದೇಶಕರಾದ ಬಾಲಕೃಷ್ಣ ರೈ,ಅಧೀಕ್ಷಕರಾದ ದೀಪಿಕಾ,ಬಿಸಿಎಂ ವಿಸ್ತರಣಾಧಿಕಾರಿ ಮೋಹನ್ ,ಕಛೇರಿ ಸಿಬ್ಬಂದಿಗಳು,ವನಧನ ವಿಕಾಸ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.