ವಿನ್ನರ್ ಆಗಿ ವಿರಾಜಪೇಟೆ ನುಸ್ರತುಲ್ ಉಲೂಮ್ ಮದ್ರಸ ಆಯ್ಕೆ
ಚೆಯ್ಯ0ಡಾಣೆ, ಡಿ 19: ವಿರಾಜಪೇಟೆ ಸಮೀಪದ ಪೆರುಂಬಾಡಿ ಸಂಶುಲ್ ಉಲಮಾ ಸಭಾಂಗಣದಲ್ಲಿ ವಿರಾಜಪೇಟೆ ರೇಂಜ್ ಮುಸಾಬಖ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಮುಶಾವರ ಸದಸ್ಯರು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ಎಡಪಾಲ ಸಾಹಿತ್ಯ ಸಂಗಮದ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ ಇಂತಹ ಕಾರ್ಯಕ್ರಮ ಸ್ಲಾಘನೀಯ ವಾದದ್ದು ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಶುಲ್ ಉಲಮಾ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಬಶೀರ್ ಹಾಜಿ ನೆರವೇರಿಸಿದರು.
ವಿರಾಜಪೇಟೆ ರೇಂಜ್ ವ್ಯಾಪ್ತಿಯ 13 ಮದರಸದ 8 ವಿಭಾಗಳಲ್ಲಿ 130 ಸ್ವರ್ದೆಗಳಲ್ಲಿ 500ಕ್ಕೂ ಮಿಕ್ಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.
ಇದರಲ್ಲಿ ವಿರಾಜಪೇಟೆಯ ನುಸ್ರತುಲ್ ಉಲೂಮ್ ಮದ್ರಸ ವಿನ್ನರ್ ಆಗಿ ಆಯ್ಕೆ ಯಾದರೆ ಕಡಂಗ ಮನ್ಶಉಲ್ ಉಲೂಮ್ ಮದ್ರಸ ರನ್ನರ್ಸ್ ಪ್ರಶಸ್ತಿ ಪಡೆದು ಕೊಂಡರು ಮೂರನೇ ಸ್ಥಾನವನ್ನು ಗೋಣಿಕೊಪ್ಪ ನೂರುಲ್ ಹುದಾ ಮದರಸ ವಿದ್ಯಾರ್ಥಿಗಳು ಪಡೆದು ಕೊಂಡರು.
ಇದೆ ಸಂದರ್ಭ ನಡೆದ ಮುಅಲ್ಲಿಮ್ ಕಲಾ ಸ್ವರ್ದೆಯಲ್ಲಿ ವಿರಾಜಪೇಟೆ ನುಸ್ರತುಲ್ ಉಲೂಮ್ ಮದ್ರಸ ಪ್ರಥಮ ಹಾಗೂ ಕಡಂಗ ಮನ್ಶಉಲ್ ಉಲೂಮ್ ಮದ್ರಸ ದ್ವಿತೀಯ ಸ್ಥಾನ ಪಡೆದು ಕೊಂಡರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಜೆ ಎಂ ಸಿ ಸಿ ಕೇಂದ್ರ ಮುಶಾವರ ಸದಸ್ಯ ಎಂ ಅಬ್ದುಲ್ ರೆಹಮಾನ್ ಮುಸ್ಲಿಯಾರ್ ವಹಿಸಿದರು.
ಪ್ರಾರ್ಥನೆಯನ್ನು ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್,
ಸ್ವಾಗತವನ್ನು ವಿರಾಜಪೇಟೆ ರೇಂಜ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಫೈಝಿ, ವಂದನೆಯನ್ನು ಜೊತೆ ಕಾರ್ಯದರ್ಶಿ ಸುಹೈಬ್ ಫೈಝಿ ನಡೆಸಿದರು.
ಈ ಸಂದರ್ಭ ವೇದಿಕೆಯಲ್ಲಿ ಪ್ರಮುಖರಾದ ರಶೀದ್ ಹಾಜಿ,ಅಬ್ದುಲ್ಲ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್, ಅಶ್ರಫ್ ಮುಸ್ಲಿಯಾರ್, ಅಬೂಬಕ್ಕರ್ ಮುಸ್ಲಿಯಾರ್ ಬಶೀರ್ ಕೆ.ಎ. ಎಡಪಾಲ,ಕೆ.ಯು. ಶಾಫಿ, ಅಬ್ದುಲ್ಲ ಕಡಂಗ ಮತಿತ್ತರರು ಇದ್ದರು.