ಅಖಿಲ ಭಾರತ ಸೈಕಲ್ ಪ್ರವಾಸದ 436 ನೇ ದಿನದಂದು ಕೊಡಗಿಗೆ ಆಗಮಿಸಿದ ಪರಿಸರ ಸ್ನೇಹಿ ರಾಬಿನ್ ಸಿಂಗ್
“ಆರೋಗ್ಯಕರ ಪರ್ಯಾವರಣಕ್ಕೆ ಪ್ರತಿಯೊಬ್ಬರೂ ಅರ್ಹರು ಜಾಗೃತಿ ಕಾರ್ಯಕ್ರಮ”
ಅಖಿಲ ಭಾರತ ಸೈಕಲ್ ಪ್ರವಾಸಿಯಾದ ಉತ್ತರ ಪ್ರದೇಶದ ಎಂ.ಆರ್. ರಾಬಿನ್ ಸಿಂಗ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಇಕೋ ಕ್ಲಬ್ (EKOIMS – Kodagu Institute of medical sciences Eco club) ಸಂಯುಕ್ತಾಶ್ರಯದಲ್ಲಿ “ಆರೋಗ್ಯಕರ ಪರ್ಯಾವರಣಕ್ಕೆ ಪ್ರತಿಯೊಬ್ಬರೂ ಅರ್ಹರು ಜಾಗೃತಿ” ಕಾರ್ಯಕ್ರಮ ನಡೆಯಿತು.
ಪರಿಸರ ಸ್ನೇಹಿ ರಾಬಿನ್ ಸಿಂಗ್ ಅವರು ತಮ್ಮ ಅಖಿಲ ಭಾರತ ಸೈಕಲ್ ಪ್ರವಾಸದ 436 ನೇ ದಿನದಂದು ಕೊಡಗಿಗೆ ಆಗಮಿಸಿದರು. ಅವರ ಪ್ರವಾಸದ ಉದ್ದೇಶವಾದ ಪರ್ಯಾವರಣ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗೆ ಭೇಟಿ ನೀಡಿ, ಅಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರ್ಯಾವರಣ ಸಂರಕ್ಷಣೆಯ ಮಹತ್ವದ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯ ಇಕೋ ಕ್ಲಬ್ ನ ಉಸ್ತುವಾರಿಗಳಾದ ಡಾ. ಶ್ವೇತ, ಡಾ. ಪ್ರಿಯದರ್ಶಿನಿ. ಡಾ. ಕಾರ್ಯಪ್ಪ ಹಾಗೂ ಪರ್ಯಾವರಣ