ಚೆಯ್ಯ0ಡಾಣೆ,ಡಿ 22. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮುದಾಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸರ್ಕಾರಿ ಶಾಲಾ ಮಕ್ಕಳ ಗಣಿತ ಸ್ವರ್ಧೆ ಆಯೋಜಿಸಲಾಗಿತ್ತು.
ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ, ಕರಡ, ಕೊಕೇರಿ, ಕಿಕ್ಕರೆ, ಎಡಪಾಲ, ಚೆಯ್ಯ0ಡಾಣೆ ಶಾಲೆಯ ಒಟ್ಟು 90 ವಿದ್ಯಾರ್ಥಿಗಳು ಸ್ವರ್ದೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದರು.
ಉದ್ಘಾಟನೆಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಆಗಮಿಸಿದರು.
ಸ್ವರ್ದೆಯಲ್ಲಿವಿಜೇತರಾದ ವಿದ್ಯಾರ್ಥಿಗಳು
4ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಕ್ರಮವಾಗಿ ಕಿಕ್ಕರೆ ಶಾಲೆಯ ಮೊಹಮ್ಮದ್ ರಾಫಿ ಕೆ.ಆರ್, ಕರಡ ಶಾಲೆಯ ರಿತಿಕಾ, ಕಿಕ್ಕರೆ ಶಾಲೆಯ ಮಹಮ್ಮದ್ ನೂಹ್ ಕೆ.ಎನ್. ಪಡೆದು ಕೊಂಡರು.
5ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಕ್ರಮವಾಗಿ ಕೊಕೇರಿ ಶಾಲೆಯ ಒಹಬುಲ್ ಇಸ್ಲಾಂ,ಎಡಪಾಲ ಶಾಲೆಯ ತನ್ಸಿರಾ ಕೆ.ಆರ್, ಕಿಕ್ಕರೆ ಶಾಲೆಯ ಫಾತಿಮತ್ ರಿಝ ಪಿ.ಎ. ಪಡೆದು ಕೊಂಡರು
6 ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಕ್ರಮವಾಗಿ ಎಡಪಾಲ ಶಾಲೆಯ ನಾಫಿಯ ಕೆ.ಎಂ, ಎಡಪಾಲ ಶಾಲೆಯ ಅಶ್ಪಿಯ ಡಿ.ಆರ್,ಎಡಪಾಲ ಶಾಲೆಯ ಶಬೀರ್ ಟಿ.ಎ.ಪಡೆದು ಕೊಂಡರು.
ಪರೀಕ್ಷೆಯ ನೇತೃತ್ವದ ಸ್ವಯಂ ಸೇವಕರಾಗಿ ಕೊಕೇರಿ ಶಾಲೆಯ ಶಿಕ್ಷಕ ಯೋಶಿಕ್,ಚೆಯ್ಯ0ಡಾಣೆ ಶಾಲೆಯ ಶಿಕ್ಷಕಿ ಸತ್ಯಮ್ಮ, ಚೇಲಾವರ ಪೊನ್ನೊಲ ಶಾಲೆಯ ಪ್ರಮೀಳಾ ಹಾಗೂ ಕರಡ ಶಾಲೆಯ ಫಶೀಲಾ ಕಾರ್ಯನಿರ್ವಹಿಸಿದರು.
ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ಸ್ವಾಗತ ಹಾಗೂ ವಂದನೆಯನ್ನು ನೆರವೇರಿಸಿದರು ಈ ಸಂದರ್ಭ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.