ಎಮ್ಮೆಮಾಡು ಶಹೀದಿಯ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕೋತ್ಸವ
ಎಮ್ಮೆಮಾಡು, ಡಿ 22. ಎಮ್ಮೆಮಾಡುವಿನಲ್ಲಿ ಕಾರ್ಯಾಚರಿಸುತ್ತಿರುವ ಶಹೀದಿಯ ಅನಾಥ ಮತ್ತು ಬಡ ಮಕ್ಕಳ ವಿದ್ಯಾಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಹಲವಾರು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ಸೂಫಿ ಶಹೀದ್ ದರ್ಗಾ ಶರೀಫ್ ನಲ್ಲಿ ಝಿಯಾರತ್ ನೊಂದಿಗೆ ಪ್ರಾರಂಭ ವಾಯಿತು ಶಹೀದಿಯ ಅನಾಥ ಮಂದಿರದ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ( ಅಂದಾಯಿ) ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅದ್ಯಕ್ಷ ಅಬೂಬಕ್ಕರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇಸ್ಮಾಯಿಲ್ ನಾಪೋಕ್ಲು,
ಮುಖ್ಯೋಪಾಧ್ಯಾಯರಾದ ಮುಹಮ್ಮದ್ ಅಶ್ರಫಿ ಹಾಗೂ ಅನಾಥ ಮಂದಿರ ಪ್ರಾಧ್ಯಾಪಕರಾದ
ನಜ್ಮುದ್ದೀನ್ ಝುಹ್ರಿ, ಕೋಶಾಧಿಕಾರಿ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಎಮ್ಮೆಮಾಡು ಖತೀಬ್ ಹಾಫಿಲ್ ಜುನೈದ್ ಅಲ್ ಜಲಾಲಿ ಮುಖ್ಯ ಭಾಷಣ ನಡೆಸಿದರು.
ಕರ್ನಾಟಕದ ಪ್ರಸಿದ್ಧ ಬುರ್ದಾ ಅಲಾಪನೆಯ ತಂಡವಾದ ಕಮರುದ್ದೀನ್ ಅನ್ವಾರಿ ಸಖಾಫಿ ನೇತೃತ್ವದ ತಂಡದಿಂದ ವಿಶ್ವ ಪ್ರಖ್ಯಾತ ಖಸೀದತುಲ್ ಬುರ್ಧಾ ಆಲಾಪನೆಯನ್ನು ನಡೆಯಿತು ,
ಪ್ರಾರ್ಥನೆಯನ್ನು ಸಯ್ಯದ್ ಸೈಫುದ್ದೀನ್ ಅಲ್ ಹೈದರೂಸಿ ತಂಗಳ್,ಸ್ವಾಗತವನ್ನು ಅಬೂಬಕ್ಕರ್ ಅನ್ವಾರಿ,ನಜ್ಮುದ್ದಿನ್ ಝುಹರಿ ವಂದಿಸಿ ಸ್ವಲಾವುದ್ದಿನ್ ಸಅದಿ ನಿರೂಪಿಸಿದರು.