ನೆಲ್ಯಾಹುದಿಕೇರಿಯಲ್ಲಿ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಾಹಿತ್ಯೋತ್ಸವ
ಕನ್ನಡ ಸಾಹಿತ್ಯಕ್ಕೆ ಮುಸಲ್ಮಾನರ ಕೊಡುಗೆ ಅಪಾರ : ಶಾಸಕ ಎ.ಎಸ್ ಪೊನ್ನಣ್ಣ
ನೆಲ್ಯಾಹುದಿಕೇರಿ, ಡಿ 25. ಕನ್ನಡ ಸಾಹಿತ್ಯಕ್ಕೆ ಮುಸಲ್ಮಾನ ಸಮುದಾಯದ ಕೊಡುಗೆ ಅಪಾರವಾದದ್ದು ಅದನ್ನು ಉಳಿಸಿ ಕೊಳ್ಳುವ ಕೆಲಸ ಎಸ್ ಎಸ್ ಎಫ್ ಸಂಘಟನೆ ಮಾಡುತ್ತಿದೆ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯ ಪಟ್ಟರು.
ಇವರು ನೆಲ್ಯಾಹುದಿಕೇರಿಯಲ್ಲಿ ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಶಿಶುನಾಳ ಷರೀಫ್, ಸಾರ ಅಬೂಬಕ್ಕರ್, ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ರವರಂತ ಕವಿಗಳನ್ನು ಕನ್ನಡ ಸಾಹಿತ್ಯಕ್ಕೆ ಕನ್ನಡವನ್ನ ಬೆಳಸಲಿಕ್ಕೆ, ಭಾಷೆಯನ್ನ ಬೆಳಸಲಿಕ್ಕೆಮುಸಲ್ಮಾನ ಸಮುದಾಯದ ಹಲವಾರು ಸಾಹಿತಿಗಲಿದ್ದಾರೆ.ಸಾಹಿತ್ಯದಲ್ಲಿ ಬಹಳ ದೊಡ್ಡ ಶಕ್ತಿ ಇದೆ ಎಲ್ಲಾ ಜನಾಂಗವನ್ನ,ಎಲ್ಲಾ ಧರ್ಮದವರನ್ನ, ಎಲ್ಲಾ ಜಾತಿಯವರನ್ನ ಒಗ್ಗೂಡಿಸುವಂತ ಅಪರೂಪದ ಶಕ್ತಿ ಸಾಹಿತ್ಯಕ್ಕೆ ಇದೆ ಎಂದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೊಡಗು ಮೈಸೂರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ವಿಶ್ವನಾಥ್ ಆಗಮಿಸಿ ಮಾತನಾಡಿ ಎಸ್ ಎಸ್ ಎಫ್ ಹಮ್ಮಿಕೊಳ್ಳುತ್ತಿರುವ ಸಾಹಿತ್ಯೋತ್ಸವ ಸ್ಲಾಘನೀಯವಾದದ್ದು ಸಂವಿದಾನವನ್ನು ಉಳಿಸಿಸುವಂತ ಕೆಲಸವಾಗಬೇಕು,ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರತಂದು ದೇಶಕ್ಕೆ ಮಾದರಿ ಯುವ ಸಮುಹವನ್ನು ಸಮರ್ಪಿಸುವಂತಾಗ ಬೇಕೆಂದರು.
ಎಸ್ ವೈ ಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಳಕೇರಿ ಮಾತನಾಡಿ ಎಸ್ ಎಸ್ ಎಫ್ ಸಂಘಟನೆ ಬರಹಗಾರರು, ಭಾಷಣ,ಹಾಡುಗಾರರನ್ನು ಸಮಾಜಕ್ಕೆ ಸಮರ್ಪಸುತ್ತಿದೆ, ನಮ್ಮ ಬರಹಗಳು ಸಮಾಜದ ಹಿತಾಶಕ್ತಿಯನ್ನು ಕಾಪಾಡುವಂತಿರಬೇಕು, ಭಾಷಣ ಕೂಡ ರಾಷ್ಟ್ರದ ಸಮಾಜದ ಹಾಗೂ ಮುಸ್ಲಿಂ ಸಮುದಾಯದ ಹಿತ ಶಕ್ತಿಯನ್ನ ಕಾಪಾಡುವಂತಾಗಬೇಕೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೆಪಿಸಿಸಿ ವಕ್ತಾರ ಲಕ್ಷ್ಮಣ್,ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ, ನಿಯಾಜ್ ಸುಂಟಿಕೊಪ್ಪ, ಸಿಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾll ಬಾದುಶಾ,ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಹಸೈನಾರ್ ಪಿ.ಸಿ,ಖಾಲೀದ್ ಫೈಝಿ, ಶಾಫಿ ಮಾಸ್ಟರ್, ಇಬ್ರಾಹಿಂ ಮಾಸ್ಟರ್, ಮುಖ್ಯ ತೀರ್ಪುಗಾರರಾದ ಅನ್ವರ್ ಅಸ್ ಅದಿ ಚಿಕ್ಕಮಂಗಳೂರು ಮತ್ತಿತರರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
23 ರ ಶನಿವಾರ ರಾತ್ರಿ ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಸೋಲ ಧಾರ್ಮಿಕ ಮತಪ್ರವಚನ ನೀಡಿ ಎಸ್ ಎಸ್ ಎಫ್ ಸಂಘಟನೆಯ ಉದ್ದೇಶ ಹಾಗೂ ಎಸ್ ಎಸ್ ಎಫ್ ನಿಂದ ಸಮಾಜಕ್ಕೆ ಒಳಿತಾಗುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾಧ್ಯಕ್ಷರಾದ ಲತೀಫ್ ಸುಂಟಿಕೊಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಎಸ್ ಎಸ್ ಎಫ್ ಅಧ್ಯಕ್ಷ ಝಬೈರ್ ಸಅದಿ ಮಾಲ್ದಾರೆ ವಹಿಸಿದರು. ಈ ಸಂದರ್ಭ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ,ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಚೊಕ್ಕಂಡಳ್ಳಿ,ವಿರಾಜಪೇಟೆ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್,ಕರ್ನಾಟಕ ಮುಸ್ಲಿಂ ಜಮಾ ಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ,ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಮ್, ಮರ್ಕಜ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ,ಎರ್ಮು ಹಾಜಿ, ಎಸ್ ಎಸ್ ಎಫ್ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ,ಸ್ವಾಗತ ಸಮಿತಿಯ ಅಧ್ಯಕ್ಷ ಹಸನ್ ನೆಲ್ಯಾಹುದಿಕೇರಿ,ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಝ, ಹಮೀದ್ ಕಬಡಕೇರಿ,ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಮುಜೀಬ್, ಅಜೀಜ್ ಸಖಾಫಿ,ಹಾಗೂ ಮತಿತ್ತರು ಉಪಸ್ಥಿತರಿದ್ದರು. ಎಸ್ ಎಸ್ ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತಿ ಸ್ವಾಗತಿಸಿ ವಂದಿಸಿದರು.
ಚಾಂಪಿಯನ್ ಆಗಿ ಮಡಿಕೇರಿ ಡಿವಿಷನ್ ರಾಜ್ಯ ಮಟ್ಟಕ್ಕೆ ಆಯ್ಕೆ; ರನ್ನರ್ಸ್ ಆಗಿ ವಿರಾಜಪೇಟೆ ಡಿವಿಷನ್:
ತಾ 23 ರಿಂದ ಆರಂಭಗೊಂಡ ಸ್ವರ್ದೆಗಳಲ್ಲಿ 5 ವಿಭಾಗಳಲ್ಲಿ 125 ಕ್ಕೂ ಹೆಚ್ಚು ಸ್ವರ್ಧೆಗಳಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
ಕೇರಳ, ಕರ್ನಾಟಕದ ರಾಜ್ಯದಲ್ಲಿ ತೀರ್ಪು ನೀಡಿ ಅನುಭವವಿರುವ ನುರಿತ 10 ತೀರ್ಪುಗಾರರು ತೀರ್ಪನ್ನು ನೀಡಿದರು. ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಮಡಿಕೇರಿ,ವಿರಾಜಪೇಟೆ ಹಾಗೂ ಸೋಮವಾರಪೇಟೆ ಡಿವಿಷನ್ ಗಳ ಮಧ್ಯ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಿತು. ಇದರಲ್ಲಿ ಮಡಿಕೇರಿ ಡಿವಿಷನ್ 1531 ಅಂಕ ಪಡೆದು ಚಾಂಪಿಯನ್ ಆಗಿ ಹೊರಹೋಮ್ಮಿದರೆ ವಿರಾಜಪೇಟೆ ಡಿವಿಷನ್ 1510 ಅಂಕ ಪಡೆದು ರನ್ನರ್ಸ್ ಗೆ ತೃಪ್ತಿ ಪಟ್ಟು ಕೊಂಡರು. ಮೂರನೇ ಸ್ಥಾನಕ್ಕೆ 1380 ಅಂಕ ಪಡೆದ ಸೋಮವಾರಪೇಟೆ ಡಿವಿಷನ್ ತಂಡದ ಪಾಲಾಯಿತು. ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಸ್ವರ್ದೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಫೆಬ್ರವರಿ 9 ರಿಂದ 11ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕೊಡಗು ಜಿಲ್ಲಾ ತಂಡದಲ್ಲಿ ಪ್ರತಿನಿಧಿಸಲಿದ್ದಾರೆ.
ಸಮಾರೋಪ ಸಮಾರಂಭ:
ಅಧ್ಯಕ್ಷತೆಯನ್ನು ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷ ಝಬೈರ್ ಸಅದಿ ವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವಿರಾಜಪೇಟೆ ನೆರವೇರಿಸಿದರು.
ಪ್ರಾರ್ಥನೆಗೆ ಸಯ್ಯದ್ ಸಹದುದ್ದಿನ್ ತಂಗಳ್ ನೇತೃತ್ವ ವಹಿಸಿದರು. ಮುಖ್ಯ ಭಾಷಣಗಾರರಾಗಿ ಕೇರಳದ ವಾಗ್ಮಿ ಸಮಸ್ತ ಕೇರಲ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮನ್ ಸಖಾಫಿ ಆಗಮಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್,ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ,ಕೋಶಾಧಿಕಾರಿ ಅಬ್ದುಲ್ಲ, ಎಸ್ ಜೆ ಎಂ ಅಧ್ಯಕ್ಷರಾದ ಮುಸ್ತಫಾ ಸಖಾಫಿ,ಮತ್ತಿತರರು ಉಪಸ್ಥಿತರಿದ್ದರು