ಚೆಯ್ಯ0ಡಾಣೆ, ಡಿ 25. ಸ್ಥಳೀಯ ಚೆಯ್ಯ0ಡಾಣೆ ಸಮೀಪದ ಚೇಲಾವರದ ಪಟ್ಟಚೇರುವಳಂಡ ಕುಟುಂಬಸ್ಥರು ವಿವಿದ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಗೈದು ನಿವೃತ್ತಿ ಹೊಂದಿದ ಕುಟುಂಬದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸನ್ಮಾನ ಸ್ವೀಕರಿಸಿದವರು ಪಿ.ಪಿ. ಬೆಳ್ಳಿಯಪ್ಪ ನಿವೃತ ಸಹ ನೋಂದಣಾಧಿಕಾರಿ, ಪಿ.ಬಿ. ಅಯ್ಯಪ್ಪ ನಿವೃತ ಸೈನಿಕ, ಪಿ.ಎ. ಕಾವೇರಮ್ಮ ನಿವೃತ ಪೊಲೀಸ್, ಪಿ.ಬಿ.ಕಾವೇರಮ್ಮ ನಿವೃತ ಪ್ರಿನ್ಸಿಪಾಲ್, ಪಿ.ಸಿ. ಜೋಬಿ ಹಾಗೂ ಪಿ.ಎಸ್. ರಾಧಾ ನಿವೃತ ವಿದ್ಯಾಭ್ಯಾಸ ಇಲಾಖೆ, ಪಿ.ಎಸ್. ಸರಸು ನಿವೃತ ಮುಖ್ಯ ಶಿಕ್ಷಕಿ, ಪಿ.ಬಿ. ಕುಟ್ಟಪ್ಪ ನಿವೃತ ಪೊಲೀಸ್, ಪಿ.ಟಿ. ನಂಜಪ್ಪ ನಿವೃತ ಇಂಜಿನಿಯರ್, ಪಿ.ಟಿ. ಅಂಶು ಗಣೇಶ್ ನಿವೃತ ಎಚ್ ಎಂ ಟಿ, ಪಿ.ಸಿ. ನವೀನ್ ತಿಮ್ಮಯ್ಯ ನಿವೃತ ಲೆಫ್ಟಿನೆಂಟ್ ಜನರಲ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಚೆರುವಳಂಡ.ಪಿ.ಸೋಮಣ್ಣ ವಹಿಸಿದರು. ಈ ಸಂದರ್ಭ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಹಾಗೂ ವಂದನೆ ಪಿ.ಪಿ. ಸುಬ್ಬಯ್ಯ ನೆರವೇರಿಸಿದರು.