SKSSF ಎಡಪಾಲ ಶಾಖೆ ವಾರ್ಷಿಕ ಮಹಾ ಸಭೆ

Reading Time: 2 minutes

ಕಡಂಗ: ಸಮಸ್ತ ಕೇಂದ್ರೀಯ ಸುನ್ನಿ ವಿದ್ಯಾರ್ಥಿಗಳ ಒಕ್ಕೂಟ ಎಡಪಾಲ ಶಾಖೆಯ ವಾರ್ಷಿಕ ಮಹಾಸಭೆಯು ಡಿಸೆಂಬರ್ 25 ಆದಿತ್ಯವಾರ ಸಲೀಂರವರ ಮನೆಯಲ್ಲಿ ನಡೆಯಿತು. ಶಾಖೆಯ ಅಧ್ಯಕ್ಷರಾದ ಶಮೀಮುದ್ದೀನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಬಾಖವಿರವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಿಲ್ಲಾ ಸಮಿತಿ ಪ್ರತಿನಿಧಿ ಹನೀಫ್ ಫೈಝಿರವರು ಉದ್ಘಾಟನೆಗೈದರು.
ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಮುಹಮ್ಮದ್ ರವರು ಮಾತನಾಡಿ ಸಂಘಟನೆಯ ಪ್ರಾರಂಭಕಾಲದ ಬೆಳವಣಿಗೆಗಳ ಕುರಿತು ಮೆಲುಕು ಹಾಕಿದರು. ನಂತರ ಮಾತನಾಡಿದ SKSSF ಕರ್ನಾಟಕ ರಾಜ್ಯ ಸಮಿತಿ ಮೀಡಿಯಾ ವಿಂಗ್ ಕನ್ವೀನರಾದ ಶಬೀರ್ ಫೈಝಿ ಅಲ್ ಮ‌ಅಬರೀ “ಯುವಕರು ಹೆಚ್ಚಾಗಿ ಸಂಘಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಾಮಾಜಿಕ ಪ್ರಜ್ಞೆಯುಳ್ಳ ಉತ್ತಮ ನಾಗರಿಕರಾಗಬಹುದು ಮತ್ತು ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮಾದಕ ವ್ಯಸನಗಳಂತಹ ದುಷ್ಟಗಳಿಂದ ತಮ್ಮ ಮಕ್ಕಳನ್ನು ದೂರವಿರಿಸಲು ಸಮುದಾಯ ಮತ್ತು ಸಮಾಜದ ಸಬಲೀಕರಣಕ್ಕಾಗಿ ಕಾರ್ಯಚರಿಸುತ್ತಿರುವ SKSSF ನಂತಹ ಆದರ್ಶ ಸಂಘಟನೆಗಳಲ್ಲಿ ಸಕ್ರಿಯವಾಗಿಸಿ ಎಂದರು”. ಕಾರ್ಯಕ್ರಮದಲ್ಲಿ ಊರಿನ ಹಿರಿಯ ನಾಯಕರು ಮತ್ತು ಸುನ್ನಿ ಯುವಜನ ಸಂಘದ ಸದಸ್ಯರುಗಳಾದ ಹಂಝ ಕುಪ್ಪೋಡಂಡ, ಸಲೀಂ ಬೆಂಗಳೂರು, ಶಾಖಾ ಸಮಿತಿ ಉಪಾಧ್ಯಕ್ಷರಾದ ಶಂಸುದ್ದೀನ್, ಕಾರ್ಯಕಾರಿ ಕಾರ್ಯದರ್ಶಿಯಾದ ಜಲೀಲ್ ಮತ್ತು ಸಮಿತಿ ಸದಸ್ಯರಾದ ಶರಫುದ್ದೀನ್ ಮತ್ತು ಉಪಸಮಿತಿಗಳಾದ ಕ್ಯಾಂಪಸ್ ವಿಂಗ್, ವಿಖಾಯ, ಸಹಚಾರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments