ಸಾಮಾಜಿಕ ಶೈಕ್ಷಣಿಕ ರಂಗದಲ್ಲಿ ಯುವತ್ವವನ್ನು ಸದುಪಯೋಗ ಪಡಿಸಬೇಕು: ಶಾಫಿ ಸಅದಿ
ಕುಂಜಿಲ: ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಯುವತ್ವವನ್ನು ಸದುಪಯೋಗ ಪಡಿಸಬೇಕೆಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಾಜಿ ರಾಜ್ಯಾಧ್ಯಕ್ಷ ಶಾಫಿ ಸಅದಿ ಕರೆ ನೀಡಿದರು.
ಇವರು ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ದೇಯ ವಾಕ್ಯದಲ್ಲಿ ಜನವರಿ 24 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಎಸ್ ವೈ ಎಸ್ 30 ನೇ ಮಹಾ ಸಮ್ಮೇಳನದ ಪ್ರಚಾರಾರ್ಥ ಪ್ರಿಷ್ಟೋ ಗ್ರಾಂಡ್ ಶಿಬಿರ ಕುಂಜಿಲದ ಪೈನರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೌಹಾರ್ದ ರಾಷ್ಟ ವಾಗಬೇಕು, ಅನ್ಯಾಯದ ವಿರುದ್ದ, ಅಸಹಾಯಕತೆಯ ವಿರುದ್ಧ ಹೊರಾಡಬೇಕು ಸಮುದಾಯವನ್ನು ರಕ್ಷಣೆ ಮಾಡಬೇಕೆಂದರು.
ಮುಖ್ಯ ಅತಿಥಿಯಾಗಿ ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷರಾದ ಡಾ -ಅಬ್ದುಲ್ ರಶೀದ್ ಜೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಮಾತನಾಡಿ ನಮ್ಮ ಹಕ್ಕನ್ನು ನಾವು ಪಡೆಯಬೇಕು,1994 ಜನವರಿ 24 ರಂದು ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಬೇಕಲ ಉಸ್ತಾದ್ ರವರ ಗೃಹದಲ್ಲಿ ಕೇವಲ ಕೆಲವೇ ಸದಸ್ಯರೊಂದಿಗೆ ಸ್ಥಾಪನೆಯಾದ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಇಂದು ಕರ್ನಾಟದಲ್ಲಿ ಹಲವಾರು ಸದಸ್ಯರನ್ನು ಒಗ್ಗೂಡಿಸಿ 29 ವರ್ಷ ಪೂರೈಸಿ 30ನೇ ವರ್ಷಕ್ಕೆ ಕಾಲಿಡುವಂತ್ತಾಗಿದೆ ಈ ಮಹಾ ಸಮ್ಮೇಳನವನ್ನು ಯಶಸ್ವಿ ಗೊಳಿಸಬೇಕೆಂದರು.
ಕೂರ್ಗ್ ಜಮೀಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವಿರಾಜಪೇಟೆ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಕುಂಜಿಲ ಜಮಾಅತ್ ಅಧ್ಯಕ್ಷ ಸೌಕತ್ ಆಲಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಎಸ್ ವೈ ಎಸ್ ಪ್ರಿಷ್ಟೋ ಶಿಬಿರಕ್ಕೆ ಶುಭ ಹಾರೈಸಿ ಮಾತನಾಡಿದರು.
ಶಿಬಿರದ ತರಗತಿಗೆ ನೇತೃತ್ವವನ್ನು ಮಾಳಿಯೇಕಲ್ ಸುಲೈಮಾನ್ ಸಖಾಫಿ,ಮಜೀದ್ ಮಾಸ್ಟರ್ ಅರಿಯಲ್ಲೂರ್ ವಹಿಸಿ ಮಾತನಾಡಿ ಸಂಘಟನೆಯ ಉದ್ದೇಶ,ಸಂಘಟನೆಯಿಂದ ದೊರೆಯುವ ಪ್ರಯೋಜನ, ಸಂಘಟನೆಯಿಂದ ಯಾವ ರೀತಿಯಲ್ಲಿ ಶಕ್ತಿ ಪ್ರದರ್ಶಿಸ ಬಹುದು ಎಂಬುದರ ಬಗ್ಗೆ ಅರ್ಥವತ್ತಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು.
ಸಯ್ಯದ್ ಶಿಯಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರು ತಂಗಳ್ ಎಸ್ ವೈ ಎಸ್ ನ 30 ನೇ ವಾರ್ಷಿಕ ಮಹಾ ಸಮ್ಮೇಳನದ ಪೋಸ್ಟರ್ ಬಿಡುಗಡೆ ಗೊಳಿಸಿ ಮಾತನಾಡಿದರು.
ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ 30ನೇ ವಾರ್ಷಿಕ ಸಮ್ಮೇಳನಕ್ಕೆ ಕೈಗೊಳ್ಳಬೇಕಾದ ಕಾರ್ಯಕ್ರಮದ ಮಾಹಿತಿಯನ್ನು ಯೂನಿಟ್, ಜೋನ್,ಸರ್ಕಲ್, ಹಾಗೂ ಜಿಲ್ಲೆಯ ಪದಾಧಿಕಾರಿಗಳಿಗೆ ತಿಳಿಸಿ ಅವರು ಅದನ್ನು ಅನುಷ್ಠಾನಕ್ಕೆ ತಂದು ಮಹಾ ಸಮ್ಮೇಳನ ಯಶಸ್ವಿ ಗೊಳಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ವಹಿಸಿದರು.
ಈ ಸಂದರ್ಭ ಪ್ರಮುಖರಾದ ಸಯ್ಯದ್ ಶಾಫಿ ನಹೀಮಿ ತಂಗಳ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್,ಅಬೂಬಕ್ಕರ್ ಸಿದ್ದಿಕ್ ಮೊಂಟುಗೊಳಿ,ಸಯ್ಯದ್ ಅಮೀಮ್ ತಂಗಳ್, ಕುಂಜಿಲ ಮುದರಿಸ್ ನಿಝರ್ ಅಹ್ಸನಿ ಕಕ್ಕಡಿಪುರಂ, ಮನ್ಸೂರ್ ಶಿವಮೊಗ್ಗ, ರಝಿ ಕಲ್ಕತ್ತ, ಖಲೀಲ್ ಮಾಲಿಕ್, ಶಾಹುಲ್ ಹಮೀದ್ ಮದದಿ, ಕೋಶಾಧಿಕಾರಿ ಹಂಝತ್ ಉಡುಪಿ, ಮೀಡಿಯಾ ಕಾರ್ಯದರ್ಶಿ ಹಸೈನಾರ್ ಆನೆಮಹಲ್, ಅಶ್ರಫ್ ಕೀನಾರ,ಎರ್ಮು ಹಾಜಿ,ಮೊಯಿದ್ದಿನ್ ಕುಟ್ಟಿ ಹಾಜಿ ಕೊಳಕೇರಿ,ಕೊಡಗು ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಕಾರ್ಯದರ್ಶಿ ಅಹ್ಮದ್ ಮದನಿ ಮತ್ತಿತರರು ಇದ್ದರು.