ಶನಿವಾರಸಂತೆ: ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ನಡೆದ ಸಹಸ್ರ ಕಾರ್ತೀಕ ದೀಪೋತ್ಸವ

Reading Time: 4 minutes

ಶನಿವಾರಸಂತೆ: ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ನಡೆದ ಸಹಸ್ರ ಕಾರ್ತೀಕ ದೀಪೋತ್ಸವ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸ್ವಾಸ್ಥ್ಯ ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ: ಶಾಸಕ ಡಾ. ಮಂಥರ್ ಗೌಡ

ಶನಿವಾರಸಂತೆ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವದ್ದು, ಅಂತಹ ಮಹತ್ತರ ಪಾತ್ರದೊಂದಿಗೆ ಸಮಾಜಕ್ಕೆ ತನ್ನದೇ ಆದ ಕಾಣಿಕೆಯನ್ನು ಮನೆಹಳ್ಳಿ ಮಠ ನೀಡುತ್ತಿದೆ, ಹಿಂದೂ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ ಗುರುವು ಶಿಷ್ಯನನ್ನುದ್ಧರಿಸುವ ಕಾರ್ಯ ಮಾಡಿದರೆ, ಶಿಷ್ಯ ಗುರುವಿನ ಸೇವೆ ಮಾಡಿ ತನ್ನ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತಾನೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.

ಶನಿವಾರಸಂತೆ ಸಮೀಪದ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಗುರುವಾರ ಹುಣ್ಣಿಮೆ ರಾತ್ರಿ ನಡೆದ ಸಹಸ್ರ ಕಾರ್ತೀಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡಗಿನ ಮಠಗಳಿಗೆ ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ನನ್ನಿಂದ ಸಾಮಾನ್ಯ ಭಕ್ತರ ಸರದಿ ಸಾಲಿನಲ್ಲೇ ಸೇವೆಮಾಡಲು ಸದಾ ಸಿದ್ದನಿದ್ದೇನೆ ಎಂದರು.

ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ ಆಧ್ಯಾತ್ಮಿಕತೆಯ ಜತೆಗೆ ಜೀವನದಲ್ಲಿ ಮುನ್ನಡೆದಾಗ ಪ್ರಜ್ಞಾವಂತ ಸಮಾಜ ನಿರ್ಮಾಣ ಆಗಲು ಸಾಧ್ಯ ಧರ್ಮ ಮರೆತ ರಾಷ್ಟ್ರಕ್ಕೆ ಅಥವಾ ವ್ಯಕ್ತಿಗೆ ಸುಖ ಇರುವುದಿಲ್ಲ ಧರಮದ ಜತೆಗೆ ದೈನಂದಿನ ಚಟುವಟಿಕೆಗಳು ನಡೆಸಬೇಕು ಆಗ ಸ್ವಾರ್ಥ ರಹಿತ ಸಮಾಜ ಕಾರ್ಯ ನಡೆಸಲು ಸಾಧ್ಯ. ಮಠಗಳ ಸ್ಚಾಮೀಜಿಗಳಿಂದಲೂ ನ್ಯಾಯ ದೊರಕಿಸಿಕೊಡುವ ಕಾರ್ಯ ಸಾಕಷ್ಟು ಪ್ರಕರರಣಗಳು ನಡೆದಿವೆ. .ಸ್ವಾಮೀಜಿಗಳು ಕೂಡ ಕಕ್ಷೀದಾರರಾಗಿರುವ ಘಟನೆಗಳು ನಡೆದಿವೆ ಎಂದರು.

ಬೆಂಗಳೂರಿನ ನ್ಯಾಯಾಧೀಶರಾದ ಜಯಶ್ರ್ರೀ ಮಾತನಾಡಿ ಬೆಳ್ಳಿ, ಬಂಗಾರ, ಹಣ, ಆಸ್ತಿ ಇದಾವುದೂ ನಿಜವಾದ ಸಂಪತ್ತಲ್ಲ. ನಮಗೆ ಎಲ್ಲವನ್ನೂ ದಯಪಾಲಿಸಿರುವ ಭಗವಂತನ ಸ್ಮರಣೆಯೇ ನಿಜವಾದ ಸಂಪತ್ತು. ಭಗವಂತನ ಸ್ಮರಣೆಯಿಂದ ಯಾವಾಗ ವಿಮುಖರಾಗುತ್ತೇವೆಯೋ ಅಂದೇ ಆಪತ್ತು ಎಂದರು.

ಈ ಸಂದರ್ಬದಲ್ಲಿ 2024ನೇ ವರ್ಷ ದ ಕ್ಯಾಲೆಂಡರ್ ಬಿಡುಗಡೆಯನ್ನು ಶಾಸಕರು ಬಿಡುಗಡೆ ಮಾಡಿದರು. ಶ್ರೀ ಕ್ಷೇತ್ರಕ್ಕೆ ಸಹಕಾರ ನೀಡಿದ ಗಣ್ಯರಿಗೆ ಸನ್ಮಾನ ನಡೆಯಿತು. ವೇದಿಕೆಯಲ್ಲಿ ಮನೆಹಳ್ಳಿ ಮಠಾಧ್ಯಕ್ಷರಾದ ಶ್ರೀಶ್ರೀ ಮಹಾಂತಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠಾಧ್ಯಕ್ಷರಾದ ಶ್ರೀಶ್ರೀ ರುದ್ರಮುನಿ ಮಹಾಸ್ವಾಮೀಜಿ, ಕೆಸತೂರು ಮಠಾಧ್ಯಕ್ಷರಾದ ಶ್ರೀಶ್ರೀ ಬಸವರಾಜೇಂದ್ರ ಸ್ವಾಮೀಜಿ, ವೀರಶೈವ ಮಹಾಸಭಾಧ್ಯ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ, ದೊಡ್ಡ ಬಳ್ಳಾಪುರ ಮಠಾಧ್ಯಕ್ಷರಾದ ಶ್ರೀಶ್ರೀ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ, ದೃಷ್ಟಿ ಡೆವಲಪರ್ ಸಂಸ್ಥೆಯ ಮಾಲೀಕ ರವಿಶಂಕರ್,ಗುಂಡ್ಲುಪೇಟೆ ಕ್ರಷರ್ ಮಾಲೀಕ ಮಲ್ಲಿಕಾರ್ಜುನ್ ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕ ಜಯಕುಮಾರ್ ವಹಿಸಿದ್ದರು.

ವಿಜ್ಯಂಭಣೆಯಿಂದ ನಡೆದ ಶ್ರೀ ಗುರುಸಿದ್ಧವೀರೇಶ್ವರ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ, ಶ್ರೀ ಗುರುಸಿದ್ಧವೀರೇಶ್ವರ, ಶ್ರೀ ತಪೋವನೇಶ್ವರಿ, ಚಲುವರಾಯಸ್ವಾಮಿ ಉತ್ಸವ ಮೂರ್ತಿಗಳೊಂದಿಗೆ ಯಶಳೂರಿನ ನಂದಿದ್ವಜ, ವೀರಗಾಸೆ, ದುಗ್ಗಳ ಹೊತ್ತ ಮಹಿಳೆಯರು ಉತ್ಸವಕ್ಕೆ ಮೆರುಗು ತಂದರು.
25 ಸಾವಿರ ಎಣ್ಣೆ ದೀಪಗಳನ್ನು ಹಾಗು 21 ವಿವಿಧ ಮಾದರಿಯಿಂದ ಸ್ಥಳದಲ್ಲೇ ಕೊಬ್ಬರಿ, ತರಕಾರಿ, ಎಳನೀರು, ಧಾನ್ಯಗಳನ್ನು ಬಳಸಿ ತಯಾರಿಸಿದ ದೀಪಗಳನ್ನು ಉರಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಆಕಾಶದಲ್ಲಿ ವರ್ಣರಂಜಿತ ಪಟಾಕಿಗಳನ್ನು ಸಿಡಿಸಿ ಸಾವಿರಾರು ಭಕ್ತರ ಮೆಚ್ಚುಗೆಗಳಿಸಿದ್ದು ವಿಶೇಷವಾಗಿತ್ತು, ಉತ್ಸವದಲ್ಲಿ ಪಾಲ್ಗೋಂಡಿದ್ದ ಎಲ್ಲಾ ಭಕ್ತಾದಿಗಳಿಗೆ ಅನ್ನ ಪ್ರಸಾದದ ಸಂತರ್ಪಣೆ ವ್ಯವಸ್ತೆ ಅಚ್ಚುಕಟ್ಟಾಗಿತ್ತು.

ವರದಿ : ಅಶ್ವಥ್ ಕುಮಾರ್ ಎನ್.ಎ‌. ನೀರಗುಂದ

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments