ಕೆದಮುಳ್ಳೂರು, ಜ 3: ಸಮಾಜ ಕಲ್ಯಾಣ ಇಲಾಖೆ,ವಿರಾಜಪೇಟೆ ತಾಲೂಕು,ಪೊನ್ನಂಪೇಟೆ,ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿಬಂಧ ಅಧಿನಿಯಮ “ಅಸ್ಪೃಶ್ಯತಾ ನಿವಾರಣಾ” ಕಾರ್ಯಕ್ರಮ ಹಾಗೂ ವಿಚಾರಗೋಷ್ಠಿ ಮತ್ತು ಕಾರ್ಯಾಗಾರವು ಕೆದಮುಳ್ಳೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಚಾರಮಂಡನೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ವಿರಾಜಪೇಟೆ ಗ್ರಾಮಾಂತರ ಠಾಣೆಯ ಹಿರಿಯ ಪೋಲೀಸ್ ಅಧಿಕಾರಿ ಬೋಪಣ್ಣ ಹಾಗೂ ವಿರಾಜಪೇಟೆ ನ್ಯಾಯಾಲಯದ ಹಿರಿಯ ವಕೀಲರಾದ ಸುನಿಲ್ ಕೆ.ವಿ. ರವರು ಭಾಗವಹಿಸಿ ವಿವಿಧ ಅಧಿನಿಯಮದ ಬಗ್ಗೆ,ಕಾನೂನಿನ ಕುರಿತು, ನಾಗರೀಕ ಹಕ್ಕು ಸಂರಕ್ಷಣಾ ಅದಿನಿಯಮ 1955, 1977 ಮತ್ತು ಪರಿಶಿಷ್ಟ ಜಾತಿ / ವರ್ಗಗಳ ಅಧಿನಿಯಮ 1989 ಹಾಗೂ 1955 ರಡಿ ಮತ್ತು ತಿದ್ದುಪಡಿ ನಿಯಮ 2015 ಅನುಷ್ಠಾನ ಗೊಳಿಸುವ ಅಸ್ಪೃಶ್ಯತಾ ನಿವಾರಣಾ”ಬಗ್ಗೆ ಕಾರ್ಯಗಾರದಲ್ಲಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆದಮುಳ್ಳೂರು ಗ್ರಾ.ಪಂ.ಅಧ್ಯಕ್ಷರಾದ ಜಫ್ರಿ ಉತ್ತಪ್ಪ, ವಿರಾಜಪೇಟೆ ಸಬ್ ಇನ್ಸ್ಪೆಕ್ಟರ್ ವಾಣಿ , ಅಭಿವೃದ್ಧಿ ಅಧಿಕಾರಿ ಮಣಿ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರೀತಿ ಚಿಕ್ಕಮಾದಯ್ಯ,ಗ್ರಾ.ಪಂ. ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವಾರ್ಡನ್ ಜ್ಯೋತಿಬಾ ಗೌಡರ್ ನಿರೂಪಿಸಿ,ವಾರ್ಡನ್ ಶ್ರೀಮತಿ ಸುಮಯ್ಯ ಕೆ.ಎಂ. ಸ್ವಾಗತಿಸಿ,ವಂದಿಸಿದರು.