ಚೆಯ್ಯ0ಡಾಣೆ: ಕೇರಳದ ಪಯ್ಯವೂರ್ ನಲ್ಲಿ ವರ್ಷಪ್ರತಿ ನಡೆಯಲಿರುವ ಊಟ್ ಮಹೋತ್ಸವದ ಪ್ರಯುಕ್ತ ನಾಡ್ ಗೆ ಒಳಪಟ್ಟ ಗ್ರಾಮಸ್ಥರ ವಿಶೇಷ ಸಭೆಯು ಸ್ಥಳೀಯ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಕ್ಕಮುಖ್ಯಸ್ಥ ಕುಟುಂಬಸ್ಥರ ಹಿರಿಯರಾದ ಮುಂಡಿಯೊಳಂಡ ತಮ್ಮಯ್ಯ ಹಾಗೂ ಬೊವೈರಿಯಂಡ ತಿಮ್ಮಯ್ಯ ನವರ ನೇತೃತ್ವದಲ್ಲಿ ನಡೆಯಿತು.
ನಾಡ್ ಗೆ ಒಳಪಟ್ಟ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.
ಕೇರಳದಿಂದ ಸಭೆಗೆ ಆಗಮಿಸಿದ ದೇವಸಂ ಬೋರ್ಡ್ ನಾ ಬಿಜು ರವರನ್ನು ಗ್ರಾಮಸ್ಥರು ತರಾಟೆಗೆ ತೆಗದು ಕೊಂಡ ಘಟನೆ ನಡೆಯಿತು.
ನಾಡ್ ಗೆ ಒಳಪಟ್ಟ ಗ್ರಾಮಸ್ಥರಾದ ಐತಿಚಂಡ ಬಿಮ್ಮಯ್ಯ, ಅರುಣಾ, ರಾಜೇಶ್ ಅಚ್ಚಯ್ಯ,ಪಟ್ಟಚೆರುವಂಡ ಹರಿ ಮುತ್ತಪ್ಪ, ಜೀವನ್, ಕುಮ್ಮಂಡ ಕಾಯಪ್ಪ ನಮ್ಮ ಕೊಡಗಿನ ಸ್ಥಾನದಲ್ಲಿ ಬೇರೆಯವರು ಮನೆ ನಿರ್ಮಿಸಿದ್ದು, ಮತ್ತೊಂದೆಡೆ ಮನೆ ಕಟ್ಟಲು ಅಡಿಪಾಯ ಹಾಕಿದ್ದಾರೆ. ನಮ್ಮ ಸ್ಥಾನದಲ್ಲಿ ವಾಹನ ನಿಲುಗಡೆ, ವ್ಯಾಪಾರ ಮಳಿಗೆಗಳ, ನೈವಿಧ್ಯಕ್ಕೆ ಕೊಟ್ಟ ಅಕ್ಕಿ ಮಾರಾಟ ಮತ್ತಿತರು ಕೊರೆತೆಗಳ ಬಗ್ಗೆ ಗಮನ ಸೆಳೆದರು.
ಈ ಸಂದರ್ಭ ದೇವಸಂ ಬೋರ್ಡ್ ನ ಬಿಜು ಮಾತನಾಡಿ ನಾವು ದೇವಸ್ಥಾನದ ಅಧಿಕಾರ ಸ್ವೀಕರಿಸಿ 4 ತಿಂಗಳುಗಳು ಮಾತ್ರವಾಗಿದ್ದು ಇನ್ನು ಮುಂದಕ್ಕೆ ತಮ್ಮ ಅಭಿಪ್ರಾಯ ಪರಿಗಣಿಸದೆ ಯಾವುದೇ ಕಾರ್ಯಕ್ರಮ ಕೈಗೊಳ್ಳುದಿಲ್ಲ ಎಂದರು. ಕೊಡಗಿನಿಂದ ಬರುವ ಯಾತ್ರಾರ್ಥಿ ಗಳಿಗೆ ಕೊಡಗಿನ ಆಸ್ಥಾನವಾದ (ಗುದ್ದದಲ್ಲಿ ) ನೆಟ್ ಅಳವಡಿಸಿ ತಂಗಲು ಅವಕಾಶ ಕಲ್ಪಿಸುವ ಉದ್ದೇಶವಿದೆ ಅದಕ್ಕೆ ನಿಮ್ಮ ಸಹಕಾರ ಮುಖ್ಯ ಎಂದರು.
ಕೊಡಗಿನ ನಾಡ್ ಗೆ ಒಳಪಟ್ಟ ಪೊನ್ನುಪರಬ್ ನಲ್ಲಿರುವ 1 ಎಕರೆಗೂ ಅಧಿಕ ಸ್ಥಳವನ್ನು ಬೇರೆಯವರು ಅತಿಕ್ರಮಿಸಿದ್ದು ಇದರ ಮೊಕ್ಕದ್ದಮೆ ಕೋರ್ಟ್ ನಲ್ಲಿದೆ ಎಂದು ನೆರದಿದ್ದವರಿಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಸರಕಾರದ ಅನುದಾನ ಪಡೆದು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಕೊಡಗಿನ ಸ್ಥಾನ(ಗುದ್ದ)ದಲ್ಲಿ ಕಟ್ಟಡ ನಿರ್ಮಿಸಿ ಕೊಡಗಿನಿಂದ ಬರುವ ಯಾತ್ರಾಥಿಗಳಿಗೆ ತಂಗಲು ಅವಕಾಶ ಕಲ್ಪಿಸಲಾಗುವುದೆಂದರು. ಉಳಿದ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲಾಗುದು ಎಂದು ಮಾಹಿತಿ ನೀಡಿದರು.
ನಂತರ ಸಭೆಯಲ್ಲಿದ ಎಲ್ಲರು ಅಭಿಪ್ರಾಯ ಪಡೆದು ಕೊಡಗಿನ ಸ್ಥಾನ ಗುದ್ದದಲ್ಲಿ ನೆಟ್ ಅಳವಡಿಸುವಂತೆ ಒಪ್ಪಿಗೆ ನೀಡಲಾಯಿತು.
ಟ್ರಸ್ಟಿ ಮುಂಡಿಯೋಳಂಡ ಅಜಿತ್ ಸುಬ್ಬಯ್ಯ ಮಾತನಾಡಿ ಈ ವರ್ಷದ ಊಟ್ ಹಬ್ಬದ ಮುಂಚಿತವಾಗಿ ಸಭೆ ಕರೆದು ಊಟ್ ಹಬ್ಬವನ್ನು ಯಶಸ್ವಿ ಗೊಳಿಸುವಂತೆ ಹಾಗೂ ಅಲ್ಲಿ ಬೇಕಾದ ಎಲ್ಲಾ ಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು, ಊಟ್ ಹಬ್ಬ ಕಾರ್ಯಕ್ರಮಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕರನ್ನು ಆಹ್ವಾನಿಸುವಂತೆ ತೀರ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ದೇವಸಂ ಬೋರ್ಡ್ ನ ಪ್ರವೀಣ್ ಕುಮಾರ್.ಪಿ, ಶರತ್ ಶಶಿ, ಟ್ರಸ್ಟಿಗಳಾದ ಉತ್ತಮನ್ ಕೆ.ವಿ, ಮುಂಡಿಯೋಳಂಡ ಅಜಿತ್ ಸುಬ್ಬಯ್ಯ, ಜೀವನ್ ಬಿ.ಕೆ ನಾಡ್ ಗೆ ಒಳಪಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಕುಮ್ಮಂಡ ಕಾಯಪ್ಪ ಸ್ವಾಗತ ಹಾಗೂ ವಂದನೆಯನ್ನು ಅಜಿತ್ ಸುಬ್ಬಯ್ಯ ನೆರವೇರಿಸಿದರು.